ಕೋವಿಡ್ ವ್ಯಾಕ್ಸಿನ್ ವಿತರಣೆ: ಕರ್ನಾಟಕಕ್ಕೆ 6ನೇ ಸ್ಥಾನ

ಬೆಂಗಳೂರು, ಜೂನ್ 13, 2021 (www.justkannada.in): ದೇಶದಲ್ಲಿಯೇ ಲಸಿಕೆ ವಿತರಣೆಯಲ್ಲಿ ನಾವು 6ನೇ ಸ್ಥಾನದಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ರಾಜ್ಯಕ್ಕೆ 3 ಲಕ್ಷ ಡೊಸ್ ಲಸಿಕೆ ನಿನ್ನೆ ಬಂದಿದೆ. ಕೇಂದ್ರ ಸರ್ಕಾರವೇ ಉಚಿತ ಲಸಿಕೆ ನೀಡುತ್ತಿರುವುದರಿಂದ 3 ಕೋಟಿ ಲಸಿಕೆಗೆ ನೀಡಿದ್ದ ಆರ್ಡರ್ ರದ್ದು ಮಾಡುತ್ತೇವೆ ಎಂದು ಸುದ್ದಿಗಾರರೊಗೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಾಳೆಯಿಂದ ಅನ್ ಲಾಕ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳಿಂದ ಜನರು ವಾಪಸ್ ಆಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಈ ಬಗ್ಗೆ ಒಂದಷ್ಟು ಎಚ್ಚರಿಕೆ ವಹಿಸಬೇಕಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.