ಬಿ.ವೈ ವಿಜಯೇಂದ್ರ ವರ್ಚಸ್ಸು ಕುಗ್ಗಿಸಲು ವ್ಯರ್ಥ ಪ್ರಯತ್ನ-ಕಾಂಗ್ರೆಸ್ ವಿರುದ್ದ ಬಿಜೆಪಿ ಮುಖಂಡ ಆರ್.ರಘು ಕಿಡಿ..

ಮೈಸೂರು,ಆ,26,2020(www.justkannada.in): ರಾಜಕೀಯ ಭೂಪಟದಲ್ಲಿ ಮರೆಯಾಗಿ ಅವಸಾನದಲ್ಲಿ ಸಾಗುತ್ತಿರುವ ಕಾಂಗ್ರೆಸ್,  ಹಳಿ ಇಲ್ಲದೇ ರೈಲು ಬಿಡುವ ಮೈಸೂರಿನ ವಕ್ತಾರರೊಬ್ಬರನ್ನು ಬಳಸಿಕೊಂಡು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ವರ್ಚಸ್ಸು ಕುಗ್ಗಿಸಲು ವ್ಯರ್ಥ ಪ್ರಯತ್ನ ನಡೆಸಿದೆ ಎಂದು ಬಿಜೆಪಿ ಮುಖಂಡ ಆರ್.ರಘು ಕಿಡಿಕಾರಿದ್ದಾರೆ.jk-logo-justkannada-logo

ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ  ವಿರುದ್ದ ಕಾಂಗ್ರಸ್ ನಿಂದ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಆರ್.ರಘು, ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯ ಹೆಸರಿನಲ್ಲಿ  ಯಾರ ಪುತ್ರರು ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಕಚೇರಿಗಳಲ್ಲೇ ಅಧಿಕಾರಗಳ ಸಭೆ ನಡೆಸಿ ರಾಜಾರೋಷವಾಗಿ ಅಧಿಕಾರ ನಡೆಸುತ್ತಿದ್ದರು ಎಂಬುದು ಇಡೀ ಮೈಸೂರು ಜಿಲ್ಲೆ ಹಾಗೂ ರಾಜ್ಯದ ಜನತೆಗೇ ತಿಳಿದಿದೆ ಎಂದು ಟಾಂಗ್ ನೀಡಿದರು.by-vijayendra-cm-bsy-shrink-congress-mysore-bjp-leader-r-raghu

ಮೊನ್ನೆ ಮೈಸೂರಿಗೆ ಬಂದು ಎಬ್ಬಿಸಿ ಹೋದ ಅಲೆಯ ಅಬ್ಬರಕ್ಕೆ ಕಾಂಗ್ರೆಸ್ಸಿಗರು ತತ್ತರಿಸಿದ್ದಾರೆ.  ಭವಿಷ್ಯದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿ ಪಟವಾಗಬಹುದಾದ ಆತಂಕದಲ್ಲಿ ವಿಜಯೇಂದ್ರರ ವಿರುದ್ಧ ಹಸಿ ಸುಳ್ಳಿನ ಕಥೆ ಕಟ್ಟಲು ಹೊರಟಿದ್ದಾರೆ ಎಂದು ಹರಿಹಾಯ್ದರು.

Key words: BY Vijayendra – CM BSY – shrink-congress-mysore-BJP leader- R. Raghu