ಐಸಿಸಿ ಅಂಡರ್-19 ವಿಶ್ವಕಪ್: ಕ್ವಾಟರ್ ಫೈನಲ್ಸ್’ಗೆ ಟೀಂ ಇಂಡಿಯಾ ಬಾಯ್ಸ್

ಬೆಂಗಳೂರು, ಜನವರಿ 25, 2019 (www.justkannada.in): ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ.

ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದಿರುವ ಪ್ರಿಯಮ್ ಗರ್ಗ್ ಪಡೆ ಕ್ವಾರ್ಟನ್ ಫೈನಲ್​ಗೆ ಲಗ್ಗೆ ಇಟ್ಟಿದೆ. ನಿನ್ನೆ ನಡೆದ ನ್ಯೂಜಿಲೆಂಡ್ ಅಂಡರ್-19 ವಿರುದ್ಧದ ಪಂದ್ಯದಲ್ಲೂ ಡಕ್ವರ್ತ್​ ಲುಯಿಸ್ ನಿಯಮದ ಅನ್ವಯ 44 ರನ್​ಗಳಿಂದ ಗೆದ್ದು ಬೀಗಿದರು.

ಭಾರತ 23 ಓವರ್​ನಲ್ಲಿ ವಿಕೆಟ್ ನಷ್ಟವಿಲ್ಲದೆ 115 ರನ್ ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭಿಸಿತು. ತುಂಬಾ ಸಮಯದ ಬಳಿಕ ಮಳೆ ನಿತ್ತಿತ್ತು. ಆದರ, ಭಾರತದ ಬ್ಯಾಟಿಂಗ್ ಇನ್ನಿಂಗ್ಸ್​ ಇಲ್ಲಿಗೆ ಅಂತ್ಯಗೊಳಿಸಿ ದಕ್ವರ್ತ್​ ಲುಯಿಸ್ ನಿಯಮದ ಪ್ರಕಾರ ನ್ಯೂಜಿಲೆಂಡ್​ಗೆ ಗೆಲ್ಲಲು 23 ಓವರ್​​ನಲ್ಲಿ 192 ರನ್​ಗಳ ಟಾರ್ಗೆಟ್ ನೀಡಲಾಯಿತು.

ಈ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಕಿರಿಯರು ರವಿ ಬಿಷ್ಟೋಯಿ ಹಾಗೂ ಅಥರ್ವ ಅಂಕೊಲ್ಕರ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 21 ಓವರ್​ನಲ್ಲಿ ಕೇವಲ 147 ರನ್​ಗೆ ಸರ್ವಪತನ ಕಂಡಿತು.