ಅಜಿತ್ ಅಗರ್ಕರ್’ಗೆ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ?

ನವದೆಹಲಿ, ಜನವರಿ 25, 2019 (www.justkannada.in): ಭಾರತ ಕ್ರಿಕೆಟ್ ಆಯ್ಕೆ ಸಮಿತಿಯ ಎರಡು ಸ್ಥಾನಗಳಿಗೆ ಹಲವು ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ.

ಇದರಲ್ಲಿ ಟೀಂ ಇಂಡಿಯಾದ ಮಾಜಿ ಬೌಲರ್ ಅಜಿತ್ ಅಗರ್ಕರ್ ಅವರೂ ಅರ್ಜಿ ಸಲ್ಲಿಸಿದ್ದಾರೆ. ಭಾರತ ಕ್ರಿಕೆಟ್ ಆಯ್ಕೆ ಸಮಿತಿಯ ಸ್ಥಾನಕ್ಕೆ ಅಜಿತ್ ಅಗರ್ಕರ್ ಅವರು ಆಯ್ಕೆಯಾದರೆ ಅಧ್ಯಕ್ಷ ಸ್ಥಾನವೂ ಸಿಗುವ ಸಾಧ್ಯತೆ ಇದೆ.

ಅಜಿತ್ ಅಗರ್ಕರ್ ಜೊತೆಗೆ ವೆಂಕಟೇಶ್ ಪ್ರಸಾದ್, ಚೇತನ್ ಶರ್ಮಾ, ನಯನ್ ಮೊಂಗಿಯಾ, ಎಲ್.ಶಿವರಾಮಕೃಷ್ಣನ್, ರಾಜೇಶ್ ಚೌಹಾಣ್, ಗ್ಯಾನೇಂದ್ರ ಪಾಂಡೆ, ಪ್ರೀತಮ್ ಗಂಧೆ ಅವರು ಅರ್ಜಿ ಸಲ್ಲಿಸಿದ್ದರೆ.