Sunday, November 8, 2026

Dasara Wishes

Happy Dasara
Home Front Page ಪ್ರಾಣಿ ದಯಾ ಸಂಘಟನೆಗೆ ನೆರವು ನೀಡಿ ಎಲ್ಲರ ಮನಗೆದ್ದ ಕೆ.ಎಲ್.ರಾಹುಲ್

ಪ್ರಾಣಿ ದಯಾ ಸಂಘಟನೆಗೆ ನೆರವು ನೀಡಿ ಎಲ್ಲರ ಮನಗೆದ್ದ ಕೆ.ಎಲ್.ರಾಹುಲ್

ಮುಂಬಯಿ, ಜನವರಿ 25, 2019 (www.justkannada.in): ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಪ್ರಾಣಿ ದಯಾ ಸಂಘಟನೆಯ ಕಾರ್ಯಕರ್ತ ಶ್ರವಣ್‌ ಕೃಷ್ಣನ್‌ ಎಂಬವರಿಗೆ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಮುಂದಿನ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಾಗ ಸಿಗುವ ಹಣವನ್ನು ಕೊಡುವುದಾಗಿ ಶ್ರವಣ್‌ಗೆ ರಾಹುಲ್‌ ವಾಗ್ಧಾನ ಮಾಡಿದ್ದರು. ಅದರಂತೆ ಜ. 17ರಂದು ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯದಲ್ಲಿ ರಾಹುಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಲಭಿಸಿದ ಒಂದು ಲಕ್ಷ ರೂ.ಗೆ ಇನ್ನೂ ಒಂದು ಲಕ್ಷ ರೂ. ಸೇರಿಸಿ ಶ್ರವಣ್‌ ಕೃಷ್ಣನ್‌ಗೆ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ. ಈ ಮೂಲಕ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಜನರ ಮನ ಗೆಲ್ಲುವಂಥ ಕೆಲಸ ಮಾಡಿದ್ದಾರೆ.