Sunday, September 20, 2026

BDA Apartments

ಟೆಸ್ಟ್‌ ಕ್ರಿಕೆಟ್ ರ್‍ಯಾಂಕಿಂಗ್‌: ಕೊಯ್ಲಿಯೇ ‘ಕಿಂಗ್’ ! BDA JK_Adv BDA Adv
Home Front Page ಟೆಸ್ಟ್‌ ಕ್ರಿಕೆಟ್ ರ್‍ಯಾಂಕಿಂಗ್‌: ಕೊಯ್ಲಿಯೇ ‘ಕಿಂಗ್’ !

ಟೆಸ್ಟ್‌ ಕ್ರಿಕೆಟ್ ರ್‍ಯಾಂಕಿಂಗ್‌: ಕೊಯ್ಲಿಯೇ ‘ಕಿಂಗ್’ !

ಮುಂಬಯಿ, ಜನವರಿ 25, 2019 (www.justkannada.in): ನೂತನ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲೂ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವಿಭಾಗದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಜಿಂಕ್ಯ ರಹಾನೆ 8ನೇ ಸ್ಥಾನಕ್ಕೇರಿದ್ದಾರೆ.

ವಿರಾಟ್‌ ಕೊಹ್ಲಿ ಒಟ್ಟು 928 ಅಂಕಗಳೊಂದಿಗೆ ನಂ.1 ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಇವರಿಗಿಂತ 17 ಅಂಕ ಹಿಂದಿರುವ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ 2ನೇ ಸ್ಥಾನದಲ್ಲಿದ್ದಾರೆ.

ರಹಾನೆ ಒಂದು ಸ್ಥಾನ ಮೇಲೇರಿ 8ಕ್ಕೆ ಬಂದಿದ್ದಾರೆ (759 ಅಂಕ). ಚೇತೇಶ್ವರ್‌ ಪೂಜಾರ ಆರರಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಪ್ಯಾಟ್‌ ಕಮಿನ್ಸ್‌ (904 ಅಂಕ) ಅಗ್ರಸ್ಥಾನಕ್ಕೆ ಅಂಟಿಕೊಂಡಿದ್ದಾರೆ.

2ನೇ ಸ್ಥಾನದಲ್ಲಿರುವವರು ನ್ಯೂಜಿಲ್ಯಾಂಡ್‌ನ‌ ನೀಲ್‌ ವ್ಯಾಗ್ನರ್‌ (852 ಅಂಕ). ಜಸ್‌ ಪ್ರೀತ್‌ ಬುಮ್ರಾ 6ನೇ, ಆರ್‌. ಅಶ್ವಿ‌ನ್‌ 8ನೇ ಹಾಗೂ ಮೊಹಮ್ಮದ್‌ ಶಮಿ 10ನೇ ಸ್ಥಾನದಲ್ಲಿದ್ದಾರೆ.