Thursday, September 17, 2026

BDA Apartments

ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸಂತೋಷ್ ಗಂಗ್ವಾರ್ ನೇಮಕ… BDA JK_Adv BDA Adv
Home Front Page ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸಂತೋಷ್ ಗಂಗ್ವಾರ್ ನೇಮಕ…

ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸಂತೋಷ್ ಗಂಗ್ವಾರ್ ನೇಮಕ…

ನವದೆಹಲಿ,ಮೇ,30,2019(www.justkannada.in): ನರೇಂಧ್ರ ಮೋದಿ ಅವರು 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸಂತೋಷ್ ಗಂಗ್ವಾರ್ ಅವರನ್ನ ನೇಮಕ ಮಾಡಲಾಗಿದೆ.

ಬರೇಲಿ ಕ್ಷೇತ್ರದ ಸಂಸದರಾಗಿರುವ ಸಂತೋಷ್ ಗಂಗ್ವಾರ್ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿದ್ದಾರೆ. ಇವರು 8 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಂಗಾಮಿ ಸ್ಪೀಕರ್ ಸಂತೋಷ್ ಗಂಗ್ವಾರ್ ನೂತನ ಸಂಸದರಿಗೆ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ.

ಇನ್ನು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ ಜತೆ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

Key words: Santosh Gangwar appointed Speaker of the new government.

#NewDelhi  #SantoshGangwar #Speaker