ಕೈ ಶಾಸಕಾಂಗ ಪಕ್ಷದ ಸಭೆ: ಇಬ್ಬರು ‘ಕೈ’ ಶಾಸಕರು ಗೈರು: ಸರ್ಕಾರ ಸುಭದ್ರ ಎಂದ ಮಾಜಿ ಸಿಎಂ ಸಿದ್ದರಾಮಯ್ಯ..

ಬೆಂಗಳೂರು,ಮೇ,30,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ತಂತ್ರ ರೂಪಿಸುತ್ತಿದ್ದು, ಈ ನಡುವೆ ನಿನ್ನೆ ಸಂಜೆ ಬೆಂಗಳೂರಿನಲ್ಲಿ  ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ  ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪ ಮುಖ್ಯ ಮಂತ್ರಿ ಡಾ.ಜಿ ಪರಮೇಶ್ವರ್ ,ಸಚಿವರಾದ  ಹೆಚ್ ಕೆ ಪಾಟೀಲ್ ಮುಂತಾದವರು ಭಾಗಿಯಾಗಿದ್ದರು.

ಆದರೆ ಕಾಂಗ್ರೆಸ್ ನಾಯಕರ ವಿರುದ್ದ ಇತ್ತೀಚೆಗೆ ಅಸಮಾಧಾನ ಹೊರ ಹಾಕಿದ್ದ ಇಬ್ಬರು ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ರೋಷನ್ ಬೇಗ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು.

ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಎಲ್ಲ ಶಾಸಕರು ಒಂದಾಗಿದ್ದೇವೆ. ಯಾವುದೇ ಅಸಮಾಧಾನವಿಲ್ಲ . ಸಭೆಗೆ ಎಲ್ಲರು ಭಾಗಿಯಾಗಿದ್ದಾರೆ. ಮೈತ್ರಿ ಸರ್ಕಾರ ಸುಭದ್ರ  ಎಂದು ಹೇಳಿದರು. ಹಾಗೆಯೇ ರಾಜ್ಯ ಮೈತ್ರಿ ಸರ್ಕಾರವನ್ನ ಬೀಳಿಸುವ ಬಿಜೆಪಿ ತಂತ್ರಗಾರಿಕೆ ಮೂರ್ಖತನ  ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Key words: Two MLAs were absent from the Congress Legislature Party meeting.

#bangalore #congress #meeting.