ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ ದೋಚಿ ವ್ಯಕ್ತಿ ಪರಾರಿ…

ಬೆಂಗಳೂರು,ಮೇ,30,2019(www.justlkannada.in): ವ್ಯಕ್ತಿಯೋರ್ವ  ಹಣ ದುಪ್ಪಟ್ಟು ಮಾಡುವುದಾಗಿ ಜನರನ್ನ ನಂಬಿಸಿ ಕೋಟ್ಯಾಂತರ  ರೂಪಾಯಿ ಸಂಗ್ರಹಿಸಿ ಬಳಿಕ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಟಿಸಿ ಪಾಳ್ಯ ಜನರೇ ಮೋಸ ಹೋಗಿರುವುದು. ಮಂಜುನಾಥ್ ಎಂಬಾತನೇ ಈ ರೀತಿ ವಂಚನೆ ಮಾಡಿರುವುದು. ಈತ ಹಣ ದುಪ್ಪಟ್ಟು ಮಾಡುವುದಾಗಿ ಟಿಸಿ ಪಾಳ್ಯದ ಜನರನ್ನ ನಂಬಿಸಿದ್ದಾನೆ. ಮೊದಲು ಕಡಿಮೆ ಹಣ ಪಡೆದು ದುಪ್ಪಟ್ಟು ಹಣ ನೀಡುತ್ತಿದ್ದ ಮಂಜುನಾಥ್ ನಂತರ ದೊಡ್ಡ ಮೊತ್ತದ ಹಣ ಪಡೆದು ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಇದೀಗ ಪರಾರಿಯಾಗಿದ್ದಾನೆ.

ಈ ಕುರಿತು ಆತನ ಹೆಂಡತಿಗೆ ತಿಳಿದಿದ್ದು ಪತ್ನಿ ಮೈಕೋಲೇಔಟ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದಾರೆ. ಹಣ ವಂಚನೆ ಆರೋಪದಲ್ಲಿ ಟಿಸಿ ಪಾಳ್ಯ ಜನರು ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮಂಜುನಾಥ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Key words: A man who has been robbed of a huge amount of money from people.

#crimenews #bangalore #police