ಸ್ಯಾಂಡಲ್ ವುಡ್  ನಟಿ ರಾಗಿಣಿ  ಸಿಸಿಬಿ ಪೊಲೀಸರ ವಶಕ್ಕೆ…

ಬೆಂಗಳೂರು, ಸೆಪ್ಟಂಬರ್,4,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ಗೆ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ರಾಗಿಣಿ ಅವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು  ನಟಿ ರಾಗಿಣಿ ಅವರಿಗೆ ಶಾಕ್ ನೀಡಿದ್ದು, ಸರ್ಚ್ ವಾರೆಂಟ್ ನೊಂದಿಗೆ ತೆರಳಿರುವ ಸಿಸಿಬಿ ಪೊಲೀಸರು ಯಲಹಂಕದ ಜ್ಯುಡಿಷಿನಲ್ ಲೇಓಟ್ ನಲ್ಲಿರುವ ರಾಗಿಣಿ ಅವರ ಅಪಾರ್ಟ್’ಮೆಂಟ್ ನಲ್ಲಿ ಶೋಧ ಕಾರ್ಯ  ನಡೆಸುತ್ತಿದ್ದಾರೆ ಎನ್ನಲಾಗಿದೆ.  ಈ ವೇಳೆ ನಟಿ ರಾಗಿಣಿ ಅವರ ಕಾರು ಕೀ, ಮೊಬೈಲ್ ಮನೆ ಕೀಗಳನ್ನು ವಶಕ್ಕೆ ಪಡೆದಿದ್ದಾರೆ. Sandalwood –actress- Ragini -CCB -detained - police.

ಮಾದಕ ವಸ್ತು ಮಾರಾಟ ದಂಧೆ ಪ್ರಕರಣದಲ್ಲಿ ಖ್ಯಾತ ನಟಿ ರಾಗಿಣಿ  ಆಪ್ತ ರವಿ ಶಂಕರ್ ನನ್ನು ಸಿಸಿಬಿ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು.

Key words: Sandalwood –actress- Ragini -CCB -detained – police.