ಭಾರಿ ಮಳೆಗೆ ಮನೆ ಕುಸಿತ: ಸಂಕಷ್ಟದಲ್ಲಿ ಗ್ರಾ.ಪಂ ಮಾಜಿ‌ ಅಧ್ಯಕ್ಷೆಯ ಕುಟುಂಬ…

ಮೈಸೂರು,ಸೆಪ್ಟಂಬರ್,4,2020(www.justkannada.in):  ಬಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಳೇಹೆಗ್ಗುಡಿಲು ಗ್ರಾಮದ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರ ಮನೆ ನೆಲಕ್ಕುರುಳಿದ್ದು ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.heavy-rain-former-president-grama-panchayath-saragur-mysore-house-collapse

ಹಳೇಹೆಗ್ಗುಡಿಲು ಗ್ರಾಮದ ವೀರಗಾಸೆ ಕಲಾವಿದರಾದ ನೀಲಕಂಠ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬೇಬಿ ದಂಪತಿಯ‌ ಮನೆ ಮಳೆಯಿಂದಾಗಿ  ಕುಸಿದು ಬಿದ್ದಿದ್ದು, ಈಗ ಅವರ ಕುಟುಂಬ ಹೊಗೆಸೊಪ್ಪು ಬೇಯಿಸುವ ಬ್ಯಾರನ್ ನಲ್ಲಿ ದಿನ ಕಳೆಯುವಂತಾಗಿದೆ.

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಗ್ರಾಮಗಳಲ್ಲಿ ಭಾರೀ ಮಳೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ  ವರುಣನ ಆರ್ಭಟದಿಂದಾಗಿ ಮನೆಯ ಕುಸಿದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಬೇಬಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

heavy-rain-former-president-grama-panchayath-saragur-mysore-house-collapse

ಇನ್ನು ಮನೆ ಕುಸಿದ ಹಿನ್ನೆಲೆ ಬೇಬಿ ಅವರ ಸಂಕಷ್ಟಕ್ಕೆ ಮರುಗಿರುವ ಗ್ರಾಮಸ್ಥರು, ಆದಷ್ಟು ಬೇಗ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Key words: Heavy rain- Former president- grama panchayath-saragur- mysore-house- collapse