ದಾಖಲೆ ಬರೆದ ಪುಷ್ಪ ಸಿನಿಮಾದ ಸಮಂತಾ ‘ಐಟ ಸಾಂಗ್’ !

ಬೆಂಗಳೂರು, ಡಿಸೆಂಬರ್ 29, 2021 (www.justkannada.in): ಪುಷ್ಪ ಸಿನಿಮಾದ ಎಲ್ಲ ಹಾಡುಗಳಿಗಿಂತ ಸಮಂತಾ ಅಭಿನಯದ ಐಟಂ ಸಾಂಗ್ ಫೇಮಸ್ ಆಗಿದ್ದು, ಸದ್ಯ ಯೂಟ್ಯೂಬ್‌ನಲ್ಲಿ ನಂ,1 ಸ್ಥಾನದಲ್ಲಿದೆ.

ಹೌದು, ಪುಷ್ಪ ಸಿನಿಮಾದ ಐಟಂ ಸಾಂಗ್‌ನಲ್ಲಿ ಸಮಂತಾ ಸಿಕ್ಕಾಪಟ್ಟೆ ಮಿಂಚಿದ್ದು, ಯೂಟ್ಯೂಬ್ ನಲ್ಲಿ ನಂ. 1 ಪಟ್ಟಕ್ಕೇರಿದ್ದಾರೆ.

2021ರಲ್ಲಿ ಎಚ್ಚು ಸದ್ದು ಮಾಡಿದ ಹಾಡುಗಳಲ್ಲಿ ಸಮಂತಾ ಹೆಜ್ಜೆ ಹಾಕಿದ ಊ ಅಂಟಾವಾ ಹಾಡು ನಂ.1 ಸ್ಥಾನದಲ್ಲಿದೆ. ಅತಿವೇಗವಾಗಿ ಹೆಚ್ಚು ವ್ಯೂಸ್ ಪಡೆದ ದಾಖಲೆಯನ್ನೂ ಈ ಹಾಡು ನಿರ್ಮಿಸಿದೆ.

ಯೂಟ್ಯೂಬ್ ಟ್ರೆಂಡ್ ಮತ್ತು ಜನರ ಆಯ್ಕೆ ಅನ್ವಯ ಈ ಹಾಡನ್ನು ನಂ.1 ಎಂದು ಹೇಳಲಾಗಿದೆ. ಈ ವಿಷಯವನ್ನು ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.