ನೈಟ್ ಕರ್ಫ್ಯೂ: ಥಿಯೇಟರ್’ಗೆಳಿಗೆ ಮತ್ತೆ ಸಂಕಷ್ಟ, ಕಲೆಕ್ಷನ್’ಗೂ ಕುತ್ತು

ಬೆಂಗಳೂರು, ಡಿಸೆಂಬರ್ 29, 2021 (www.justkannada.in): ಚಿತ್ರಮಂದಿರಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ನೈಟ್​ ಕರ್ಫ್ಯೂ ಜಾರಿಯಲ್ಲಿರುವುದರಿಂದ 7ಕ್ಕೆ ಕೊನೆ ಶೋ ಮುಗಿಸಬೇಕಿದೆ.

ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ. ನಿನ್ನೆಯವರೆಗೆ 5 ಶೋ ಪ್ರದರ್ಶನ ನಡೆಯುತ್ತಿತ್ತು. ಆದರೆ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ.

ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆ ಶೋ ಲಾಸ್ಟ್ ಆಗಲಿದೆ. ನೈಟ್ ಶೋ ಸ್ಥಗಿತದಿಂದ ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ.

ನೈಟ್ ಕರ್ಫ್ಯೂ ವಿಸ್ತರಣೆಯಾದ್ರೆ ಸಮಯ ಬದಲಾವಣೆಗೆ ಚಿಂತನೆ ನಡೆಸಲಾಗುತ್ತಿದೆ. ಸರ್ಕಾರ ಘೋಷಿಸಿದ 10 ದಿನಗಳ ನೈಟ್ ಕರ್ಫ್ಯೂಗೆ ಒಂದು ಶೋ ಬಂದ್ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟು 630 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿವೆ. ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಒಟ್ಟು 150 ಸಿಂಗಲ್ ಸ್ಕ್ರೀನ್ ಇವೆ. ಎಲ್ಲವೂ ಈಗ ಸಂಕಷ್ಟ ಎದುರಿಸುತ್ತಿವೆ.