ಕಿತ್ತೂರು ಕರ್ನಾಟಕದಿಂದ ನಾನು ಸಚಿವ ಸ್ಥಾನಕ್ಕೆ ಅವಕಾಶ ಕೇಳಿದ್ದೇನೆ- ಸಲೀಂ ಅಹ್ಮದ್

ನವದೆಹಲಿ,ಜೂನ್,12,2026 (www.justkannada.in): ಸಚಿವ ಸ್ಥಾನಕ್ಕಾಗಿ ನಾನು ಕಿತ್ತೂರು ಕರ್ನಾಟಕದಿಂದ ಅವಕಾಶ ಕೇಳಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಆಹ್ಮದ್ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಸಲೀಂ ಅಹ್ಮದ್, ಸಂಪುಟದ ಬಗ್ಗೆ ಪಕ್ಷದ ವರಿಷ್ಠರು ಸಿಎಂ ನಿರ್ಧಾರ ಮಾಡುತ್ತಾರೆ.  ಅಲ್ಪಸಂಖ್ಯಾತರಿಗೆ  ಹೆಚ್ಚಿನ ಆದ್ಯತೆ ನೀಡಬೇಕೆಂಬ ಕೂಗು ಇದೆ.  ಐವರಿಗೆ ಮಂತ್ರಸ್ಥಾನ ನೀಡಬೇಕು ಎಂದು ಸಮುದಾಯದ ಕೂಗಿದೆ ಕಿತ್ತೂರು ಕರ್ನಾಟಕದಿಂದ ನಾನು ಅವಕಾಶ ಕೇಳಿದ್ದೇನೆ ಎಂದರು.

22 ವರ್ಷದಿಂದ ಈ ಭಾಗದಲ್ಲಿ ಮುಸ್ಲೀಂ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು ಎಂದು ಜನರು ಮನವಿ ಮಾಡಿದ್ದಾರೆ. ಹೀಗಾಗಿ ಸಹಜವಾಗಿ ನನಗೆ ಅವಕಾಶ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಪರಿಷತ್ ಸದಸ್ಯ ಸಲೀಂ ಅಹ್ಮದ್ ತಿಳಿಸಿದರು.

Key words:  Iministerial position, from, Kittur Karnataka ,Salim Ahmed