ಮಲೇಷ್ಯಾದ ಸೆಪಾಂಗ್‌ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ ಗೆದ್ದ ಭಾರತದ ಯುವ ರೇಸರ್‌ ಆದಿತ್ಯ ಪಟ್ನಾಯಕ್‌

Indian Young Racer Aditya Patnaik Wins First International Car Racing Title in Malaysia Indian young racing driver Aditya Patnaik has won his first international car racing title by emerging champion in the Sporting Class category of the third round of the Gold Vios Championship Malaysia, held at the Sepang International Circuit. For this achievement, he received a prize of 15,000 Malaysian Ringgit (approximately ₹3.5 lakh).

 

ಸೆಪಾಂಗ್ (ಮಲೇಷ್ಯಾ), ಜು. 27: ಭಾರತದ ಯುವ ಕಾರು ರೇಸರ್ ಆದಿತ್ಯ ಪಟ್ನಾಯಕ್ ಸೆಪಾಂಗ್ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಗೋಲ್ಡ್ ವಿಯೊಸ್ ಚಾಂಪಿಯನ್‌ಶಿಪ್ ಮಲೇಷ್ಯಾದ ಮೂರನೇ ಸುತ್ತಿನ ಸ್ಪೋರ್ಟಿಂಗ್ ಕ್ಲಾಸ್ ವಿಭಾಗದಲ್ಲಿ ಚಾಂಪಿಯನ್ ಆಗುವ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ಕಾರು ರೇಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಾಧನೆಗಾಗಿ ಅವರಿಗೆ 15000 ಮಲೇಷ್ಯನ್ ರಿಂಗೆಟ್ (ಅಂದಾಜು 3.5 ಲಕ್ಷ ರುಪಾಯಿ) ಬಹುಮಾನ ಲಭಿಸಿದೆ.

ಮುಂಬೈನ ಆದಿತ್ಯ ಮೊದಲ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಬಳಿಕ ನಡೆದ ಎರಡನೇ ರೇಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ಒಟ್ಟಾರೆ ಮೂರನೇ ಸುತ್ತಿನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪೋಲೊ ಕಪ್ ಇಂಡಿಯಾದಲ್ಲಿ ಸತತ ಎರಡು ವರ್ಷ ರಾಷ್ಟ್ರೀಯ ರನ್ನರ್-ಅಪ್ ಆಗಿದ್ದ ಆದಿತ್ಯ, ಅಂತಾರಾಷ್ಟ್ರೀಯ ಕಾರು ರೇಸಿಂಗ್‌ಗೆ ಕಾಲಿಟ್ಟ ಮೊದಲ ವರ್ಷದಲ್ಲೇ ಈ ಸಾಧನೆ ಮಾಡಿದ್ದಾರೆ.

ರಾಯೊ ರೇಸಿಂಗ್ ಪರ ಮಾಜಿ ಫಾರ್ಮುಲಾ-1 ಚಾಲಕ ಅಲೆಕ್ಸ್ ಯಂಗ್ ಅವರ ಆ್ಯಕ್ಸಲ್ ಸ್ಪೋರ್ಟ್ಸ್ ತಂಡಕ್ಕಾಗಿ ಸ್ಪರ್ಧಿಸಿದ ಆದಿತ್ಯ, ಮಳೆ ಹಾಗೂ ಬದಲಾಗುತ್ತಿದ್ದ ಹವಾಮಾನದ ಕಾರಣ ಕಠಿಣವಾಗಿದ್ದ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. 21 ಚಾಲಕರ ಸ್ಪರ್ಧೆಯಲ್ಲಿ ಮೊದಲ ರೇಸ್ ಆರಂಭದಲ್ಲೇ ಕೆಲ ಸ್ಥಾನಗಳನ್ನು ಕಳೆದುಕೊಂಡರೂ, ಮಲೇಷ್ಯಾದ ತಾಜ್ ಐಮಾನ್ ವಿರುದ್ಧ ರೋಚಕ ಪೈಪೋಟಿ ನಡೆಸಿ ಮೂರನೇ ಸ್ಥಾನ ಗಳಿಸಿದರು. ಲ್ಯೂ ಝುವಾನ್ ಯಾನ್ ಮೊದಲ ಹಾಗೂ ತಾಜ್ ಐಮಾನ್ ಎರಡನೇ ಸ್ಥಾನ ಪಡೆದರು.

ಮೊದಲ ರೇಸ್‌ನ ಅಗ್ರ ಎಂಟು ಚಾಲಕರ ಆರಂಭಿಕ ಕ್ರಮವನ್ನು ಎರಡನೇ ರೇಸ್‌ಗೆ ತಲೆಕೆಳಗಾಗಿಸಿದ್ದರಿಂದ ಆದಿತ್ಯ ಆರನೇ ಸ್ಥಾನದಿಂದ ಆರಂಭಿಸಿದರು. ಉತ್ತಮ ಆರಂಭದೊಂದಿಗೆ ಮೂರನೇ ಲ್ಯಾಪ್‌ನಲ್ಲೇ ಮೂರನೇ ಸ್ಥಾನಕ್ಕೇರಿದ ಅವರು, ಸೇಫ್ಟಿ ಕಾರ್ ಅವಧಿಯ ನಂತರ ಎರಡನೇ ಸ್ಥಾನಕ್ಕೇರಿದರು. ಬಳಿಕ ಆ್ಯಡಂ ಮಿಕೈಲ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಆದಿತ್ಯ, ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡು ಚೊಚ್ಚಲ ಅಂತಾರಾಷ್ಟ್ರೀಯ ಗೆಲುವು ದಾಖಲಿಸಿದರು. ಆ್ಯಡಂ ಮಿಕೈಲ್ ಹಾಗೂ ಅರಿಫ್ ಅಜ್ಮಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

‘ಮೊದಲ ರೇಸ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಎರಡನೇ ರೇಸ್‌ನಲ್ಲಿ ಹೋರಾಟ ಬಿಡದೆ ಮುನ್ನಡೆ ಸಾಧಿಸಿ ಗೆದ್ದಿದ್ದು ನನ್ನ ಪಾಲಿಗೆ ಈ ವರ್ಷದ ಅತ್ಯುತ್ತಮ ಅನುಭವ’ ಎಂದು ಆದಿತ್ಯ ಹೇಳಿದರು.

‘ಕಾರ್ಟಿಂಗ್‌ನಿಂದ ಫಾರ್ಮುಲಾ ಕಾರುಗಳವರೆಗೆ ಸ್ಪರ್ಧಿಸಿರುವ ಪ್ರತಿಯೊಂದು ವಿಭಾಗದಲ್ಲೂ ಆದಿತ್ಯ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಂತಾರಾಷ್ಟ್ರೀಯ ರೇಸಿಂಗ್‌ನ ಮೊದಲ ಋತುವಿನಲ್ಲೇ ಈ ಗೆಲುವು ಅವರ ಪ್ರತಿಭೆಗೆ ಸಾಕ್ಷಿ,” ಎಂದು ರಾಯೊ ರೇಸಿಂಗ್ ಸಿಇಒ ಹಾಗೂ ಕೋಚ್ ಸೌರವ್ ಬಂಡೋಪಾಧ್ಯಾಯ ಹೇಳಿದರು.

ಮಾಜಿ ಮಲೇಷ್ಯನ್ ಫಾರ್ಮುಲಾ-1 ಚಾಲಕ ಅಲೆಕ್ಸ್ ಯಂಗ್, ‘ಮಲೇಷ್ಯಾದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಆದಿತ್ಯ ಪರಿಸ್ಥಿತಿಗೆ ಅತ್ಯಂತ ವೇಗವಾಗಿ ಹೊಂದಿಕೊಂಡರು. ಅವರ ಪರಿಶ್ರಮಕ್ಕೆ ಈ ಗೆಲುವು ತಕ್ಕ ಪ್ರತಿಫಲ’ ಎಂದು ಶ್ಲಾಘಿಸಿದರು.

ಭೀಕರ ಅಪಾಘತದಿಂದ ಚೇತರಿಕೆ:

2023ರ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ ಆಗಿರುವ ಆದಿತ್ಯ ಕಳೆದ ವರ್ಷ ಸಿಂಗಲ್ ಸೀಟರ್ ರೇಸ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೈ ಮುರಿದುಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ತಿಂಗಳು ರೇಸಿಂಗ್‌ನಿಂದ ದೂರ ಉಳಿದಿದ್ದ ಅವರು, ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಒಂದು ಸುತ್ತು ಬಾಕಿ ಇದ್ದು, 88 ಅಂಕಗಳೊಂದಿಗೆ ಆದಿತ್ಯ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ.

ಆದಿತ್ಯಗಿದೆ ಬೆಂಗಳೂರಿನ ನಂಟು!

2023ರಲ್ಲಿ ಬೆಂಗಳೂರಿನ ಮೆಕೊ ಕಾರ್ಟೋಪಿಯಾ ಸರ್ಕ್ಯೂಟ್‌ನಲ್ಲಿ ನಡೆದ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆದಿತ್ಯ ಚಾಂಪಿಯನ್ ಆಗಿದ್ದರು. ಇದೇ ಸಾಧನೆಯ ಮೂಲಕ ಅವರು ಭಾರತವನ್ನು ಪ್ರತಿನಿಧಿಸಿ ಅಂತಾರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವಕಾಶ ಪಡೆದಿದ್ದರು.

Key words: Indian Young Racer, Aditya Patnaik, Wins First International Car Racing Title, Malaysia

SUMMARY:

Indian Young Racer Aditya Patnaik Wins First International Car Racing Title in Malaysia

Indian young racing driver Aditya Patnaik has won his first international car racing title by emerging champion in the Sporting Class category of the third round of the Gold Vios Championship Malaysia, held at the Sepang International Circuit. For this achievement, he received a prize of 15,000 Malaysian Ringgit (approximately ₹3.5 lakh).

The Mumbai-based racer finished third in the opening race before delivering a stellar performance to win the second race, securing the overall championship title for the third round.

Aditya, who was the national runner-up in the Polo Cup India for two consecutive years, has achieved this milestone in his very first year of competing in international car racing.