Monday, September 21, 2026

BDA Apartments

ಯಾರಾದ್ರೂ ರಾಜೀನಾಮೆ ಕೊಟ್ರೆ ಕೆಲ ನಿಮಿಷದಲ್ಲಿ ಅಂಗೀಕಾರ- ಸಿಎಂ ಡಿಕೆ ಶಿವಕುಮ...
Home Front Page ಯಾರಾದ್ರೂ ರಾಜೀನಾಮೆ ಕೊಟ್ರೆ ಕೆಲ ನಿಮಿಷದಲ್ಲಿ ಅಂಗೀಕಾರ- ಸಿಎಂ ಡಿಕೆ ಶಿವಕುಮಾರ್

ಯಾರಾದ್ರೂ ರಾಜೀನಾಮೆ ಕೊಟ್ರೆ ಕೆಲ ನಿಮಿಷದಲ್ಲಿ ಅಂಗೀಕಾರ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು ಆಗಸ್ಟ್,4,2026 (www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿ ಅಸಮಾಧಾನಗೊಂಡಿರುವ ಹಾಗೂ ರಾಜೀನಾಮೆ ನೀಡುವುದಾಗಿ ಹೇಳಿರುವ ಶಾಸಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್,  ಯಾರಾದರೂ  ರಾಜೀನಾಮೆ ಕೊಟ್ಟರೇ ಕೆಲ ನಿಮಿಷದಲ್ಲಿ ಅಂಗೀಕಾರ ಮಾಡುತ್ತೇವೆ. ಪಕ್ಷದ ಶಿಸ್ತು ಮೀರಿ ರಾಜೀನಾಮೆ ನಾಟಕವಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ನೀಡಲು ಬಂದರೆ ಕ್ಷಣಮಾತ್ರದಲ್ಲೇ ಅವರ ರಾಜೀನಾಮೆಯನ್ನು ಅಂಗೀಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಯಾರಾದ್ರೂ ರಾಜೀನಾಮೆ ಕೊಟ್ರೆ ಕೆಲ ನಿಮಿಷದಲ್ಲಿ ಅಂಗೀಕಾರ BDA JK_Adv BDA Adv

ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಎಲ್ಲರಿಗೂ ಒಂದೇ ಬಾರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಹಿರಿಯರು ಹಾಗೂ ಆಕಾಂಕ್ಷಿಗಳು ತಾಳ್ಮೆಯಿಂದಿರಬೇಕು. ಪಕ್ಷದ ನಿಯಮ ಮತ್ತು ಶಿಸ್ತನ್ನು ಮೀರಿ ನಡೆದರೇ ಸಹಿಸಲ್ಲ ಸರ್ಕಾರ ಅಥವಾ ಪಕ್ಷಕ್ಕೆ ರಾಜೀನಾಮೆ ಬೆದರಿಕೆ ಹಾಕುವ ಮೂಲಕ ಒತ್ತಡ ಹೇರಲು ಯತ್ನಿಸುವವರ ತಂತ್ರಗಳಿಗೆ ಹೈಕಮಾಂಡ್ ಅಥವಾ ಸರ್ಕಾರ ಮಣಿಯುವುದಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಸಿಎಂ ಡಿಕೆ ಶಿವಕುಮಾರ್ jk02_new jk02 new

Key words: Cabinet expansion, resigns, accepted, within, few minutes, CM, DK Shivakumar