Tuesday, August 4, 2026

BDA Apartments

Home Front Page ಬೆಳದಿಂಗಳ ಬೆಳಕಲ್ಲಿ ಹೃದಯಸ್ಪರ್ಶಿ ಮಾತೃ ಭೋಜನ: ಕೈತುತ್ತಿನ ಮೂಲಕ ಸನಾತನ ಸಂಸ್ಕೃತಿಯ ಮೆಲುಕು

ಬೆಳದಿಂಗಳ ಬೆಳಕಲ್ಲಿ ಹೃದಯಸ್ಪರ್ಶಿ ಮಾತೃ ಭೋಜನ: ಕೈತುತ್ತಿನ ಮೂಲಕ ಸನಾತನ ಸಂಸ್ಕೃತಿಯ ಮೆಲುಕು

ಬೆಂಗಳೂರು, ಆಗಸ್ಟ್, 4,2026 (www.justkannada.in):  ನಗರದ ದಾಸನಪುರ ಹೋಬಳಿ ವ್ಯಾಪ್ತಿಯ ತಮ್ಮೇನಹಳ್ಳಿಯ ಶಿವತೇಜನಗರದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿವತೇಜಸ್ಸು ಶಾಖೆ ಆಯೋಜಿಸಿದ್ದ ‘ಮಾತೃ ಭೋಜನ (ಕೈತುತ್ತು)’ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ನೂರಾರು ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ಮರೆಯಾಗುತ್ತಿರುವ ಸನಾತನ ಸಂಸ್ಕೃತಿಯ ಸಂಪ್ರದಾಯವನ್ನು ಮರುಜೀವಗೊಳಿಸಿದರು. ಕಾರ್ಯಕ್ರಮಕ್ಕೂ ಮುನ್ನ 60 ವರ್ಷ ಮೇಲ್ಪಟ್ಟ ಪೋಷಕರಿಗೆ ಮಕ್ಕಳು ಪುಷ್ಪನಮನ ಸಲ್ಲಿಸಿದರೆ, ಹಿರಿಯರು ಅಕ್ಷತೆ ಹಾಕಿ ಆಶೀರ್ವದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಹನುಮಂತಣ್ಣ, “ತಾಯಿಯ ಅಮೃತ ಹಸ್ತದ ಕೈತುತ್ತಿನ ಸಂಸ್ಕೃತಿ ಇಂದು ಮೊಬೈಲ್ ಮತ್ತು ಚಮಚದ ಬಳಕೆಯಿಂದ ಮರೆಯಾಗುತ್ತಿದೆ. ಮಾತೃ ಭೋಜನವು ತಾಯಿ-ಮಗುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಪರೂಪದ ಕಾರ್ಯಕ್ರಮ” ಎಂದು ಹೇಳಿದರು. ಸಾಲುಮರದ ತಿಮ್ಮಕ್ಕ ಹಾಗೂ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಯ ಉದಾಹರಣೆ ನೀಡಿ, ಮಾತೃತ್ವವು ಕೇವಲ ಜನ್ಮ ನೀಡುವುದಲ್ಲ, ಕರುಣೆ ಮತ್ತು ಮಮತೆಯ ಸಂಕೇತ ಎಂದರು.

ಯೋಗ ಪ್ರಚಾರ್ಯೆ ರಶ್ಮಿ ಲೇಪಾಕ್ಷಿ ಮಾತನಾಡಿ, “ಯೋಗ ಎಂದರೆ ಕೇವಲ ವ್ಯಾಯಾಮವಲ್ಲ, ಅದು ಉತ್ತಮ ಜೀವನಶೈಲಿ” ಎಂದು ತಿಳಿಸಿದರು.

ಯೋಗ ಪ್ರದರ್ಶನ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದರೆ, ಮಾತೃ ಭೋಜನ ಕಾರ್ಯಕ್ರಮ ಹಳೆಯ ಸಂಸ್ಕೃತಿ ಮತ್ತು ಕುಟುಂಬ ಬಾಂಧವ್ಯದ ಮಹತ್ವವನ್ನು ನೆನಪಿಸಿದ ವಿಶೇಷ ಕಾರ್ಯಕ್ರಮವಾಗಿ ಮೂಡಿಬಂದಿತು.

ENGLISH SUMMARY..

Moonlight “Matru Bhojana” Revives Traditional Bonding

Bengaluru, Aug. 4: A heartwarming Matru Bhojana (Mother’s Hand-Feeding) programme was organised by the Shivatejassu branch of Sri Patanjali Yoga Shikshana Samiti at Sri Malleshwara Swamy Temple, Shivatejanagar, Thammenahalli, Dasanapura Hobli.

Hundreds of mothers lovingly fed their children by hand, reviving a cherished Sanatana tradition and celebrating the unique bond between mother and child. The event also featured Matru-Pitru Pooja, where children paid floral tribute to elders and received their blessings.

Resource person Hanumanthanna highlighted the importance of preserving traditional values, while Yoga Acharya Rashmi Lepakshi said yoga is not just exercise but a way of life. Yoga demonstrations, devotional songs, and cultural performances added to the event’s significance.

Key words: Traditional Bonding, Matru Bhojana, Revives, Sri Patanjali Yoga Shikshana Samiti