Sunday, October 11, 2026

Dasara Wishes

Happy Dasara
Home Front Page ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣಾ ಸಮಿತಿ ಮತ್ತೊಂದು ಎಡವಟ್ಟು ಬಯಲಿಗೆ

ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣಾ ಸಮಿತಿ ಮತ್ತೊಂದು ಎಡವಟ್ಟು ಬಯಲಿಗೆ

ಬೆಂಗಳೂರು, ಜೂನ್ 05, 2022 (www.justkannada.in): ರೋಹಿತ್ ಚಕ್ರತೀರ್ಥ ಪಠ್ಯಪರಿಷ್ಕರಣಾ ಸಮಿತಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಹೌದು. ಬಸವಣ್ಣವರ ಪಠ್ಯ ವಿವಾದದ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಪಠ್ಯದಲ್ಲೂ ವಿವಾದ ಶುರವಾಗುವ ಲಕ್ಷಣಗಳು ಗೋಚರಿಸುತ್ತಿವೆ.  ಸಂವಿಧಾನದ ಕುರಿತ ಪಾಠದಲ್ಲಿ ಡಾ.ಬಿ.ಅಂಬೇಡ್ಕರ್ ಅವರಿಗೆ ಇರುವ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಟ್ಟಿದೆ. ಇದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

9 ನೇ ತರಗತಿ ನಮ್ಮ ಸಂವಿಧಾನ ಪಾಠದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಟ್ಟಿದೆ. ಪಾಠದಲ್ಲಿ ಸಂವಿಧಾನದ ಕರುಡು ರಚನಾ ಸಮಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಪಾಠದಲ್ಲೂ ಎಲ್ಲೂ ಸಂವಿಧಾನ ಶಿಲ್ಪಿ ಎಂದು ಹೇಳಿಲ್ಲ.

ಅಂಬೇಡ್ಕರ್ ಭಾರತದ ಸಂವಿಧಾನ ರಚನೆಗೆ ನೀಡಿದ ಕೊಡುಗೆ ಆಧರಿಸಿ ಸಂವಿಧಾನ ಶಿಲ್ಪಿ ಎಂಬ ಕರೆಯಲಾಗಿದೆ.. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಸಂವಿಧಾನ ಶಿಲ್ಪಿ ಬಿರುದಿಗೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ.