ಸಿದ್ದರಾಮಯ್ಯಗೆ ಬುದ್ಧಿ ಇಲ್ಲ, ಆರ್ ಎಸ್ ಎಸ್ ಟೀಕಿಸುವ ಕಾಂಗ್ರೆಸ್ ಸರ್ವನಾಶ ಖಚಿತ: ಸಚಿವ ಭೈರತಿ ಬಸವರಾಜ

ಬೆಂಗಳೂರು, ಜೂನ್ 05, 2022 (www.justkannada.in): ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ. ಆರ್ ಎಸ್‌ಎಸ್ ಚಡ್ಡಿ ಸುಡುವ ಅಭಿಯಾನದ ಬಗ್ಗೆ ಹೇಳಿರುವ ಸಿದ್ದರಾಮಯ್ಯಗೆ ಬುದ್ಧಿ ಇಲ್ಲ ಎಂದು ಸಚಿವ ಭೈರತಿ ಬಸವರಾಜ ಟೀಕಿಸಿದ್ದಾರೆ.

ಆರ್ ಎಸ್ ಎಸ್  ಚಡ್ಡಿ ಸುಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಭೈರತಿ ಬಸವರಾಜ್, ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆರ್ ಎಸ್‌ಎಸ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಗೆ ಬುದ್ಧಿ ಭ್ರಮಣೆ ಆಗಿದೆ.ಆರ್ ಎಸ್ ಎಸ್ ದೇಶ ಸೇವೆಗೆ ಹೆಸರಾಗಿರುವ ಸಂಸ್ಥೆ, ಆರ್ ಎಸ್ ಎಸ್ ಬಗ್ಗೆ ಈ ರೀತಿಯ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರಲ್ಲ ಎಂದು ಹೇಳಿದ್ದಾರೆ.