Sunday, October 11, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಮೈಸೂರು ದಸರಾ: ಏಕಬಳಕೆ ಪ್ಲಾಸ್ಟಿಕ್ ನಿಷೇಧ.

ಮೈಸೂರು ದಸರಾ: ಏಕಬಳಕೆ ಪ್ಲಾಸ್ಟಿಕ್ ನಿಷೇಧ.

ಮೈಸೂರು,ಅಕ್ಟೋಬರ್,11,2026 (www.justkannada.in):  ಮೈಸೂರು ದಸರಾ ಹಿನ್ನೆಲೆಯಲ್ಲಿ ಎಲ್ಲಾ ದಸರಾ ಕಾರ್ಯಕ್ರಮಗಳ ಸ್ಥಳಗಳಲ್ಲಿ* ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆ ಮಾಡಬಾರದು ಎಂದು ಮೈಸೂರು ಮಹಾನಗರ ಪಾಲಿಕೆ ಸೂಚಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು, ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ನಗರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ, ಎಲ್ಲಾ ದಸರಾ ಕಾರ್ಯಕ್ರಮಗಳ ಆಯೋಜಕರು, ವ್ಯಾಪಾರಸ್ಥರು, ಆಹಾರ ಮಳಿಗೆಗಳ ನಿರ್ವಹಣಾಕಾರರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ  ಸೂಚಿಸಿದ್ದಾರೆ.Mysuru Dasara mysore dasara plastic1

  1. *ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಯುವ ದಸರಾ, ಅರಮನೆ ಆವರಣದ ಸಾಂಸ್ಕೃತಿಕ ಕಾರ್ಯಕ್ರಮಗಳು, ಇತರೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ದಸರಾ ಕಾರ್ಯಕ್ರಮಗಳ ಸ್ಥಳಗಳಲ್ಲಿ* ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆ ಮಾಡಬಾರದು.
  2. ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ತಟ್ಟೆಗಳು, ಪ್ಲಾಸ್ಟಿಕ್ ಕಪ್‌ಗಳು, ಲೋಟಗಳು, ಚಮಚಗಳು, ಫೋರ್ಕ್‌ಗಳು ಮತ್ತು ಸ್ಟ್ರಾಗಳ ಬದಲಿಗೆ *ಮರುಬಳಕೆ ಮಾಡಬಹುದಾದ ಪಾತ್ರೆಗಳು, ಅಡಿಕೆ ಹಾಳೆಯ ತಟ್ಟೆಗಳು ಹಾಗೂ ಪರಿಸರಸ್ನೇಹಿ ಪರ್ಯಾಯಗಳನ್ನು ಬಳಸಬೇಕು.*
  3. ಕಾರ್ಯಕ್ರಮಗಳ ಆಯೋಜಕರು ತಮ್ಮ ವ್ಯಾಪ್ತಿಯ ಆಹಾರ ಮಳಿಗೆಗಳು ಹಾಗೂ ಮಾರಾಟ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಕಲಾವಿದರು, ಸಿಬ್ಬಂದಿ ಹಾಗೂ ಅತಿಥಿಗಳಿಗೆ ಆಹಾರ ಮತ್ತು ಪಾನೀಯ ಪೂರೈಸುವಾಗಲೂ ಈ ಸೂಚನೆಗಳನ್ನು ಪಾಲಿಸಬೇಕು.
  4. ವ್ಯಾಪಾರಸ್ಥರು ಗ್ರಾಹಕರಿಗೆ ಬಟ್ಟೆ ಅಥವಾ ಕಾಗದದ ಚೀಲಗಳ ಬಳಕೆಯನ್ನು ಉತ್ತೇಜಿಸಬೇಕು. ಸಾರ್ವಜನಿಕರು ಖರೀದಿಗಾಗಿ ಬರುವಾಗ *ಬಟ್ಟೆ ಚೀಲಗಳನ್ನು ತರಬೇಕು.*
  5. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಾಧ್ಯವಾದಷ್ಟು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡಲು ಸಹಕರಿಸಬೇಕು.
  6. ಎಲ್ಲಾ ಕಾರ್ಯಕ್ರಮಗಳ ಸ್ಥಳಗಳು ಹಾಗೂ ಮಳಿಗೆಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪಾಲಿಕೆಯ ಅಧಿಕೃತ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗೆ ಹಸ್ತಾಂತರಿಸಬೇಕು. ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯಬಾರದು.Mysuru Dasara MK Savitha PT3

ಪಾಲಿಕೆಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದು, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಂಡುಬಂದಲ್ಲಿ ಅನ್ವಯಿಸುವ ನಿಯಮಗಳನ್ವಯ ಕ್ರಮ ಕೈಗೊಳ್ಳಲಾಗುವುದು.Avoid jk02_new jk02 new

ಸ್ವಚ್ಛ ಹಾಗೂ ಪರಿಸರಸ್ನೇಹಿ ದಸರಾ ಆಚರಣೆಗೆ ಎಲ್ಲರೂ ಸಹಕರಿಸೋಣ. “ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ, ಮೈಸೂರಿನ ಸ್ವಚ್ಛತೆ ಕಾಪಾಡೋಣ ಎಂದು ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ಮನವಿ ಮಾಡಿದ್ದಾರೆ.

 

English Summary
Title

Mysuru Dasara Goes Green: MCC Bans Single-Use Plastic at Festival Venues

Short Description
Mysuru City Corporation (MCC) has announced a strict ban on single-use plastics to ensure an eco-friendly Mysuru Dasara. To manage waste during the festival, the MCC has prohibited vendors, hotels, and food stalls from using plastic plates, cups, spoons, and water bottles, as well as flex banners. Officials are mandating sustainable alternatives like steel, paper, and arecanut plates. Visitors at major hubs like Mysore Palace and Chamundi Hills are urged to bring reusable bottles and cloth bags. Joint teams are also executing massive cleanliness drives to keep the heritage city pristine for tourists.
Keywords
Mysuru Dasara, Avoid, using, banned, single-use plastic items, City Corporation