ದೋಸ್ತಿ ಸರ್ಕಾರದ ಇನ್ನೂ ಹಲವು  ಶಾಸಕರಿಂದ ರಾಜೀನಾಮೆ- ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ…

ಬೆಂಗಳೂರು, ಜು,20,2019(www.justkannada.in):  ದೋಸ್ತಿ ಸರ್ಕಾರದ ಇನ್ನೂ  ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ  ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌ ರಾಜಣ್ಣ  ಹೊಸ ಬಾಂಬ್‌ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ  ಕೆ.ಎನ್ ರಾಜಣ್ಣ,  ಇನ್ನು ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ. ಅವರ ಹೆಸರು ಹೇಳಿದ್ರೆ ಅಲರ್ಟ್ ಆಗಿ ಬಿಡ್ತಾರೆ. ಹೀಗಾಗಿ ರಾಜೀನಾಮೆ ನೀಡುವವರ ಹೆಸರು ಹೇಳಲ್ಲ ಎಂದು ತಿಳಿಸಿದರು.

ಮೈತ್ರಿ ಮಾಡಿಕೊಂಡು ನಾವು ನೆಲ ಕಚ್ಚಿದ್ದೇವೆ, ಸರ್ಕಾರ ಉರುಳಬೇಕೆನ್ನುವುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ನಮ್ಮ ಮೊದಲ ತಪ್ಪು, ಈಗ ಸರ್ಕಾರ ಬೀಳಬೇಕು ತಪ್ಪು ಅರಿವಾಗಬೇಕು ಎಂದು ರಾಜಣ್ಣ ಹೇಳಿದರು.

Key words: resigns – many – MLAs –government-Former MLA- KN Rajanna