ಅವರು ಹೇಳಿದ್ದೇನ್ನ ಸಾಬೀತು ಮಾಡಿದ್ರೆ  ಬಹಿರಂಗವಾಗಿ ಹ್ಯಾಂಗ್ ಮಾಡಿಕೊಳ್ತೀನಿ- ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸವಾಲು..

ಬೆಂಗಳೂರು,ಜು,20,2019(www.justkannada.in): ನನ್ನ ಮೇಲೆ ಆರೋಪಗಳಿವೆ ಎಂದು ನೀವು ಹೇಳುವುದಾದರೇ ಶೃಂಗೇರಿ ಅಥವಾ ಮಂಜುನಾಥನ ಸನ್ನಿಧಿಗೆ ಬಂದು ಆಣೆ ಮಾಡಿ. ನೀವು ಹೇಳಿದ್ದು ಸಾಭೀತು ಮಾಡಿದ್ರೆ ನಾನು ಬಹಿರಂಗವಾಗಿ ಹ್ಯಾಂಗ್ ಮಾಡಿಕೊಳ್ತೀನಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲು ಹಾಕಿದರು.

ಬೆಂಗಳೂರಿನ ರಮಡಾ ರೆಸಾರ್ಟ್ ಬಳಿ ಮಾತನಾಡಿ ಸಿಎಂ ಹೆಚ್,ಡಿಕೆ ವಿರುದ್ದ ಕಿಡಿಕಾರಿದ ಶಾಸಕ ರೇಣುಕಾಚಾರ್ಯ, ದೇವೇಗೌಡರ ಕುಟುಂಬ ಸುಳ್ಳುಹೇಳಯವುದರಲ್ಲಿ ನಂಬರ್ ಒನ್.   ಅದರಲ್ಲಿ ದೇವೇಗೌಡರ ಕುಟುಂಬಕ್ಕೆ ಡಾಕ್ಟರೇಟ್ ಕೊಡಬೇಕು. ಹೆಚ್ ಡಿ ಕುಮಾರಸ್ವಾಮಿ ಅವರೇ ನಿಮ್ಮ ನೆರವಿನಿಂದ ನಾನು ಮಂತ್ರಿಯಾಗಿರಲಿಲ್ಲ.   ಯಡಿಯೂರಪ್ಪ ಅವರ ನೆರವಿನಿಂದ ಮಂತ್ರಿಯಾಗದ್ದೆ  ಎಂದು ಟಾಂಗ್ ಕೊಟ್ಟರು.

ಸದನದಲ್ಲಿ ನಾನು ಮೌನವಾಗಿದ್ದಕ್ಕೆ ಅರ್ಥವಿದೆ.  ಸಿಎಂ ಹೆಚ್.ಡಿ ಕುಮಾರಸ್ವಾಮಿ ನನ್ನ ಹೆಸರಲ್ಲಿ ಭಜನೆ ಮಾಡಿದ್ರು. ನನ್ನ ಮೇಲೆ ಹಲವು ಆರೋಪಗಳಿವೆ ಅಂದ್ರು. ಅವರು ಹೇಳಿದ್ದೇನ್ನ ಸಾಬೀತು ಮಾಡಿದ್ರೆ ಹ್ಯಾಂಗ್ ಮಾಡಿಕೊಳ್ತೀನಿ. ನಿಮಗೆ ತಾಕತ್ತಿದ್ದರೇ ಬಹಿರಂಗ ಚರ್ಚೆಗೆ ಬನ್ನಿ ಇಲ್ಲವೇ ನೀವು ಪ್ರಮಾಣಕ್ಕೆ ಬನ್ನಿ. ಶೃಂಗೇರಿ ಮತ್ತು ಮಂಜುನಾಥನ ಸನ್ನಿಧಾನದಲ್ಲಿ ಪ್ರಮಾಣ ಮಾಡಲಿ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

Key words: BJP MLA- Renukacharya-challenge – CM HD Kumaraswamy