ಹಲವು ರಾಜ್ಯಗಳಿಗಳಿಗೆ ಹೊಸ  ರಾಜ್ಯಪಾಲರ ನೇಮಕ…

ನವದೆಹಲಿ,ಜು,2019(www.justkannada.in): ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನ ನೇಮಕ ಮಾಡಲಾಗಿದೆ.

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಉತ್ತರ ಪ್ರದೇಶದ  ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಾಗೆಯೇ ಮಧ್ಯಪ್ರದೇಶದ ರಾಜ್ಯಪಾಲರಾಗಿ ಲಾಲ್ ಜಿ ಟಂಡನ್,  ನಾಗಲ್ಯಾಂಡ್  ರಾಜ್ಯಪಾಲರಾಗಿ ಆರ್ ಎನ್ ರವಿ ನೇಮಕವಾಗಿದ್ದಾರೆ.

ಸುಪ್ರಿಂ ಕೋರ್ಟ್ ನ ಹಿರಿಯ ವಕೀಲ ಜಗದೀಪ್ ಧನಕ್ಕರ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರೇ,   ಬಿಜೆಪಿ ಎಂಎಲ್ ಎ ಫಾಗು ಚೌಹಾಣ್  ಅವರನ್ನ ಬಿಹಾರದ ರಾಜ್ಯಪಾಲರಾಗಿ , ರಮೇಶ್ ಬಯಾಸ್  ಅವರನ್ನ ತ್ರಿಪುರಾ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Appointment – new governor – many states