ಮೈಸೂರು-ಬೆಂಗಳೂರು ಮಾರ್ಗದ ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ರೈಲು ಸೇರ್ಪಡೆ…

ಮೈಸೂರು,ಜು,20,2019(www.justkannada.in): ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ  ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು  ಮೈಸೂರು- ಬೆಂಗಳೂರು ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ,

ಬೆಂಗಳೂರಿನಿಂದ ಮೈಸೂರಿಗೆ ನಿತ್ಯವೂ ಸಂಜೆ 5.20ಕ್ಕೆ ಈ ರೈಲು ಸಂಚರಿಸಲಿದ್ದು, ಮೈಸೂರಿನಿಂದ ಅದೇ ರೈಲು 8.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಕೇವಲ 2.40ನಿಮಿಷದ ಈ ಪ್ರಯಾಣಕ್ಕೆ 30. ರೂ ಮಾತ್ರ ನಿಗದಿ ಮಾಡಲಾಗಿದೆ.  ಭಾನುವಾರ ಹೊರತುಪಡಿಸಿ ವಾರದ ಆರು ದಿನವೂ ಈ ರೈಲು ಸಂಚಾರ ನಡೆಸಲಿದ್ದು ಮೈಸೂರು-ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಇದು ತುಂಬಾ ಅನುಕೂಲವಾಗಲಿದೆ.

ಹೊಸ ರೈಲು ಸಂಚಾರದ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಮೆಮು ಹೆಸರಿನ ರೈಲಿನಲ್ಲಿ ಪ್ರಯಾಣಿಕರಿಗೆ ಹೊಸ ಅನುಕೂಲ ಮಾಡಿಕೊಡಲಾಗಿದೆ. ಮತ್ತೊಂದು ಘೋಷಣೆ ಮುಂದಿವಾರ ರಿವೀಲ್ ಮಾಡುವುದಾಗಿ ಟ್ವಿಟ್ಟರ್  ನಲ್ಲಿ ಹೇಳಿದ್ದಾರೆ. ಪ್ರತಾಪ್ ಸಿಂಹ ಅವರು ಹೊಸ ಯೋಜನೆ ಘೋಷಣೆ ಮಾಡುವುದಾಗಿ ಹೇಳಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

Key words: Another -good news – Mysore-Bangalore-  New train -addition.