Monday, September 21, 2026

BDA Apartments

ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ ! BDA JK_Adv BDA Adv
Home Cinema ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ !

ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ !

ಬೆಂಗಳೂರು, ಅಕ್ಟೋಬರ್ 22, 2019 (www.justkannada.in): ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ.

ಇದೇ ಕಾರಣಕ್ಕೆ ಕೆಲ ಚಿತ್ರಗಳಿಂದ ಅವರನ್ನು ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಟಾಲಿವುಡ್ ಸೂಪರ್ಸ್ಟಾರ್ ನಾಗಚೈತನ್ಯ ಸಿನಿಮಾವನ್ನು ತಿರಸ್ಕರಿಸುವ ಮೂಲಕ ರಶ್ಮಿಕಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನಾಗಚೈತನ್ಯರೊಂದಿಗಿನ ಮುಂದಿನ ಸಿನಿಮಾಕ್ಕೆ ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದರು. ಇದು ಪ್ರಖ್ಯಾತ ನಿರ್ಮಾಪಕ ದಿಲ್ ರಾಜು ಅಸಮಾಧಾನಕ್ಕೆ ಕಾರಣವಾಗಿದೆ. ರಶ್ಮಿಕಾ ಕೇಳಿದಷ್ಟು ಹಣವನ್ನು ದಿಲ್ ರಾಜು ಅವರು ನೀಡದಿದ್ದಕ್ಕೆ ಚಿತ್ರವನ್ನೇ ಮಾಡಲ್ಲ ಎಂದಿದ್ದಾರೆ ರಶ್ಮಿಕಾ.