Friday, August 7, 2026

BDA Apartments

Home Cinema ಅಭಿಮಾನಿಗಳ ಕ್ಷಮೆ ಕೋರಿದ ಬಿಗ್ ಬಿ

ಅಭಿಮಾನಿಗಳ ಕ್ಷಮೆ ಕೋರಿದ ಬಿಗ್ ಬಿ

ಮುಂಬೈ, ಅಕ್ಟೋಬರ್ 22, 2019 (www.justkannada.in): ಸಾಮಾನ್ಯವಾಗಿ ಅಮಿತಾಭ್ ಭಾನುವಾರಗಳಂದು ತಮ್ಮ ಮನೆಯ ಹೊರಗೆ ಕಾದು ಕುಳಿತಿರುವ ಅಭಿಮಾನಿಗಳನ್ನು ಮನೆಯಿಂದ ಹೊರಗೆ ಬಂದು ಭೇಟಿ ಮಾಡುತ್ತಾರೆ.

ಆದರೆ ಈ ಭಾನುವಾರ ಆರೋಗ್ಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿಲ್ಲ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಮನೆಯ ಹೊರಗೆ ತಮಗಾಗಿ ಕಾದು ಕುಳಿತು ನಿರಾಸೆ ಅನುಭವಿಸಿದ್ದ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಇದಕ್ಕಾಗಿ ಟ್ವಿಟರ್ ಮೂಲಕ ಅಮಿತಾಭ್ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ. ನೀವು ಬಂದರೂ ನನಗೆ ನಿಮ್ಮನ್ನು ಭೇಟಿ ಮಾಡಲು ಮನೆಯಿಂದ ಹೊರಬರಲಾಗಲಿಲ್ಲ. ಅದಕ್ಕೆ ಕ್ಷಮೆಯಿರಲಿ ಎಂದು ಬರೆದುಕೊಂಡಿದ್ದಾರೆ.