Tuesday, September 22, 2026

BDA Apartments

ಪೌರತ್ವ ಕಾಯಿದೆ ಕುರಿತ ರಜನಿಕಾಂತ್ ಟ್ವೀಟ್’ಗೆ ಆಕ್ರೋಶ ! BDA JK_Adv BDA Adv
Home Cinema ಪೌರತ್ವ ಕಾಯಿದೆ ಕುರಿತ ರಜನಿಕಾಂತ್ ಟ್ವೀಟ್’ಗೆ ಆಕ್ರೋಶ !

ಪೌರತ್ವ ಕಾಯಿದೆ ಕುರಿತ ರಜನಿಕಾಂತ್ ಟ್ವೀಟ್’ಗೆ ಆಕ್ರೋಶ !

ಚೆನ್ನೈ, ಡಿಸೆಂಬರ್ 20, 2019 (www.justkannada.in): ಪೌರತ್ವ ಕಾಯಿದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರ ಕುರಿತ ಸೂಪರ್ ಸ್ಟಾರ್ ರಜನೀಕಾಂತ್ ಮಾಡಿದ ಟ್ವೀಟ್ ಕುರಿತು ಟ್ವಿಟ್ಟರ್ ನಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ಸಮಸ್ಯೆಗೂ ಹಿಂಸೆ ಪರಿಹಾರವಲ್ಲ. ಏನೇ ವಿರೋಧಗಳಿದ್ದರೂ ಶಾಂತ ರೀತಿಯಿಂದ ಬಗೆಹರಿಸೋಣ. ಪ್ರತಿಭಟನೆ ಮಾಡಿದ ಶಾಂತಿ ಕದಡಬೇಡಿ ಎಂದು ರಜನೀಕಾಂತ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದರು.

ಇದಕ್ಕೆ ಕೆಲವರು ತಿರುಗೇಟು ನೀಡಿದ್ದು, ಹಾಗಿದ್ದರೆ ಏನೇ ಮಾಡಿದರೂ ಬಾಯಿ ಮುಚ್ಚಿಕೊಂಡಿರಬೇಕಾ? ರಾಜಕೀಯಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ ಎಂದು ರಜನೀಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ರಜನಿ ವಿರುದ್ಧವಾಗಿ ಶೇಮ್ ಆನ್ ಯೂ ರಜನಿ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.