ಸ್ಯಾಂಡಲ್’ವುಡ್ ಗೆ ಕೃತಜ್ಞತೆ ಹೇಳುತ್ತಾ ಕಣ್ಣೀರಿಟ್ಟ ಶಾನ್ವಿ !

ಬೆಂಗಳೂರು, ಡಿಸೆಂಬರ್ 20, 2019 (www.justkannada.in): ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್ ಗಾಗಿ ಹೈದ್ರಾಬಾದ್​ಗೆ ಹೋಗಿದ್ದ ಶಾನ್ವಿ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಮತ್ತೆ ನಿಮ್ಮ ಮುಂದೆ ಬರ್ತಿದ್ದೀನಿ. ಸ್ಯಾಂಡಲ್​ವುಡ್​ನಲ್ಲಿ ನನಗೆ ಒಳ್ಳೆ ಅವಕಾಶ ಸಿಕ್ಕಿತು. ಈ ಸಿನಿಮಾದಿಂದ ಮತ್ತೆ ಇಲ್ಲೂ ಅವಕಾಶ ಸಿಗುತ್ತೆ ಅಂದುಕೊಂಡಿದ್ದೇನೆ ಎಂದು ಭಾವುಕರಾಗಿದ್ದಾರೆ ಈ ಕ್ಯೂಟ್ ನಟಿ.

ಇನ್ನು ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಶಾನ್ವಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಒಂದಲ್ಲ ಎರಡಲ್ಲ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದ್ದು ಸಹಜವಾಗಿಯೇ, ಶ್ರೀಮನ್ನಾರಾಯಣ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.