Monday, September 21, 2026

BDA Apartments

ನಾಳೆಯಿಂದ ಇನ್ನೂ ಐದು ದಿನಗಳ ಕಾಲ ಮಳೆ- ಹವಮಾನ ಇಲಾಖೆ ಮುನ್ಸೂಚನೆ BDA JK_Adv BDA Adv
Home Front Page ನಾಳೆಯಿಂದ ಇನ್ನೂ ಐದು ದಿನಗಳ ಕಾಲ ಮಳೆ- ಹವಮಾನ ಇಲಾಖೆ ಮುನ್ಸೂಚನೆ.

ನಾಳೆಯಿಂದ ಇನ್ನೂ ಐದು ದಿನಗಳ ಕಾಲ ಮಳೆ- ಹವಮಾನ ಇಲಾಖೆ ಮುನ್ಸೂಚನೆ.

ಬೆಂಗಳೂರು,ಡಿಸೆಂಬರ್,14,2022(www.justkannada.in):  ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಳಿಯ ನಡುವೆ ಮೋಡ ಕವಿದ ವಾತಾವರಣ ಮಳೆಯಾಗಿದ್ದು , ಚಳಿ ಮಳೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ನಾಳೆಯಿಂದ ಮತ್ತೆ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ತಜ್ಞ ಆರ್.ಪ್ರಸಾದ್, ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಚಳಿ, ಗಾಳಿ, ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.ನಾಳೆಯಿಂದ ಇನ್ನೂ ಐದು ದಿನಗಳ ಕಾಲ ಮಳೆ Continued rain in Uttara Kannada district

 ಬಂಗಾಳಕೊಲ್ಲಿಯಲ್ಲಿ ನಾಳೆ ವಾಯುಭಾರ ಕುಸಿತವಾಗಲಿದ್ದು,  ಹೀಗಾಗಿ ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಮುನ್ಸೂಚನೆ ಇದೆ. ಬೆಂಗಳೂರಿನ ಸುತ್ತಮುತ್ತಲೂ 1ರಿಂದ 2 ಸೆಂ.ಮೀ. ಮಳೆಯಾಗಿದೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಆರ್.ಪ್ರಸಾದ್ ತಿಳಿಸಿದ್ದಾರೆ.

Key words: Rain – five- days –state-Meteorological- department