ಸಿದ್ದರಾಮಯ್ಯರನ್ನ ಕೆಳಗಿಳಿಸಿ ಡಿಕೆಶಿಯನ್ನ ಸಿಎಂ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ- ಶಾಸಕ ಜನಾರ್ಧನ ರೆಡ್ಡಿ.

ಕೊಪ್ಪಳ, ಏಪ್ರಿಲ್​ 23,2024(www.justkannada.in): ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿ.ಕೆ ಶಿವಕುಮಾರ್ ರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್​ಗೆ ದುಡ್ಡು ಕೊಡುವ ಸಿಎಂ ಬೇಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು  ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ​ ಕಾಯುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ. ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್ ​ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ. ಹೈಕಮಾಂಡ್​ಗೆ ಡಿ.ಕೆ ಶಿವಕುಮಾರ್ ​ರಂತಹ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಡಿ.ಕೆ,ಶಿವಕುಮಾರ್​ ರನ್ನು ಸಿಎಂ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ. ಮಂಡ್ಯ ಸಮಾವೇಶದಲ್ಲಿ ರಾಹುಲ್ ಈ ಸಂದೇಶ ರವಾನೆ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.

Key words: Rahul Gandhi –CM-DK Shivakumar-MLA-Janardhana Reddy