ಭಾರತಕ್ಕೆ ರಫೆಲ್ ಯುದ್ಧ ವಿಮಾನ ಹಸ್ತಾಂತರ…

ನವದೆಹಲಿ,ಅ,8,2019(www.justkannada.in): ವಿಜಯದಶಮಿ ದಿನದಂತೆ ಭಾರತಕ್ಕೆ ರಫೆಲ್ ಬಲ ಬಂದಿದೆ. ಹೌದು , ಫ್ರಾನ್ಸ್ ನಲ್ಲಿ ಇಂದು ರಫೆಲ್ ಯುದ್ಧ ವಿಮಾನವನ್ನ ಭಾರತಕ್ಕೆ ಹಸ್ತಾಂತರಿಸಲಾಯಿತು.

ಫ್ರಾನ್ಸ್ ನ ಮೆರಿಗ್ ನ್ಯಾಕ್ ನಲ್ಲಿ ಡಸಾಲ್ಟ್ ಕಂಪನಿಯ ಸಿಇಓ ಏರಿಕ್ ಟ್ರಾಪಿಯರ್ ಅವರು ಭಾರತದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರಫೆಲ್ ಯುದ್ಧ ವಿಮಾನ  ಹಸ್ತಾಂತರಿಸಿದರು. ಒಂದು ಯುದ್ಧ ವಿಮಾನವನ್ನ ಔಪಚಾರಿಕವಾಗಿ ಹಸ್ತಾಂತರಿಸಿದರು. ಈ ಮೂಲಕ ಭಾರತಕ್ಕೆ ರಫೆಲ್ ಬಲ ಸಿಕ್ಕಿದೆ.

ಇನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ನಲ್ಲೇ ರಫೆಲ್ ಯುದ್ಧ ವಿಮಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Key words: Rafale -war- extradition –India- Defense Minister Rajanath Singh