ನನ್ನ ನೇತೃತ್ವದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ : ಪವರ್ ಇಟ್ಕೊಂಡು ನೀವು ಏನು ಕೆಲಸ ಮಾಡಿದ್ದೀರಾ..?  ಜೆಡಿಎಸ್ ನಾಯಕರಿಗೆ ಸುಮಲತಾ ಅಂಬರೀಶ್ ಟಾಂಗ್.

ಮಂಡ್ಯ,ಮಾರ್ಚ್,10,2023(www.justkannada.in):  ತನ್ನ ವಿರುದ್ದ ಪದೇ ಪದೇ ಟೀಕೆಗಳ ಸುರಿಮಳೆಗೈಯುತ್ತಿದ್ದ ಜೆಡಿಎಸ್ ನಾಯಕರಿಗೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ಮೂಲಕ ಖಡಕ್ ಟಾಂಗ್ ನೀಡಿದ್ದಾರೆ.

ಮಂಡ್ಯದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ  ಜೆಡಿಎಸ್ ನಾಯಕರ ವಿರುದ್ದ ಹರಿಹಾಯ್ದ ಸಂಸದೆ ಸುಮಲತಾ ಅಂಬರೀಶ್, 4 ವರ್ಷಗಳಲ್ಲಿ ನಾಣು ಅನೇಕ ಸವಾಲುಗಳನ್ನ ಎದುರಿಸಿದ್ದೇನೆ.  ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಪುತ್ರನ ವಿರುದ್ದ ಗೆದ್ದು ಬಂದೆ. ಅಂಬರೀಶ್ ರ ಜನಾಶೀರ್ವಾದ ನನ್ನ ಮೇಲೆ ಇತ್ತು. ನಾನು ನನ್ನ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ . ನನ್ನ ಕೆಲಸದ ಬಗ್ಗೆ ಯಾರು ಬೇಕಾದರೂ ಪ್ರಶ್ನಿಸಲಿ. ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಸಂಪೂರ್ಣ ಶ್ರಮಿಸಿದ್ದೇನೆ ಎಂದರು.

ಚುನಾವಣೆ ಸಂದರ್ಭದಲ್ಲಿ ನನ್ನನ್ನ ತೇಜೋವಧೆ ಮಾಡಿದರು. ಚುನಾವಣ ಆದ ಮೇಲೂ ನನ್ನ ಮೇಲೆ ಟೀಕೆ ಮಾಡಿದರು. ನನ್ನ ಮೇಲೆ ಎರಡು ಕಡೆ ಹಲ್ಲೆಗೆ ಯತ್ನ ನಡೆದಿತ್ತು. ಶ್ರೀರಂಗಪಟ್ಟಣ ಪಾಂಡವಪುರದಲ್ಲಿ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು.  ಒಬ್ಬೊಬ್ಬರು ಅವಚ್ಯ ಶಬ್ದಗಳಿಂದ ನಿಂದಿಸಿದರು. ಎಂಪಿ ಅನ್ನೋದು ಇರಲಿ. ಒಂದು ಹೆಣ್ಣು ಅಂತಾ ನೋಡಲಿಲ್ಲ. ಅವಾಚ್ಯ ಶಬ್ದದಿಂದ ನಿಂದಿಸಿದರು ಎಂದು ಜೆಡಿಎಸ್ ನಾಯಕರ ವಿರುದ್ದ ಗುಡುಗಿದರು.

ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗಡೆ ಕೇಳುವ ಸಮಯ ಬಂದಿದೆ.

ನಾನು ಮನಸ್ಸು ಮಾಡದಿದ್ದರೇ ಮೈಶುಗರ್ ಓಪನ್ ಆಗುತ್ತಿರಲಿಲ್ಲ. ಮೈಶುಗರ್ ಪಾಂಡವಪುರ ಕಾರ್ಖಾನೆ ಒಂದು ಹಂತಕ್ಕೆ ಬಂದಿದೆ.  ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ್ರೆ ಕೆಲವರಿಗೆ ಭಯ. ಬರೀ ಭದ್ರ ಭಧ್ರಕೋಟೆ ಅಂತಾ ಎದೆ ಹೊಡೆದುಕೊಳ್ಳುತ್ತಾರೆ. ಆದರೆ ಅಭಿವೃದ್ದಿ ಯಾಕೆ ಮಾಡಿಲ್ಲ ಅಂತಾ ಕೇಳುವ ಸಮಯ ಬಂದಿದೆ.  ರಾಜಕಾರಣದ ಭಾಷಣವನ್ನ ಜನ ಕೇಳಿಕೊಂಡು ಸುಮ್ಮನಿರಬೇಕಾ.? ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗಡೆ ಕೇಳುವ ಸಮಯ ಬಂದಿದೆ ಎಂದು ಹೇಳಿದರು.

ಕನ್ನಂಬಾಡಿ ಅಣೆಕಟ್ಟು ಸುರಕ್ಷತೆ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಕೆಆರ್ ಎಸ್ ಜಲಾಶಯದ ಸುರಕ್ಷತೆ ಬಗ್ಗೆ ಯಾರು ಮಾತನಾಡಲಿಲ್ಲ ಎಂದ ಸಂಸದೆ ಸುಮಲತಾ ಅಂಬರೀಶ್  ಮಂಡ್ಯದಲ್ಲಿ ಏನ್ ಉದ್ಧಾರ ಮಾಡಿದ್ದೀರಾ..?  ಜಿಲ್ಲೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರಬೇಕು. ನೀವು ಪವರ್ ಇಟ್ಕೊಂಡು ಏನು ಕೆಲಸ ಮಾಡಿದ್ದೀರಾ..? ಎಂದು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು.

ಕೋವಿಡ್ ವೇಳೆ ನಾನು ಸಾಕಷ್ಟು ಶ್ರಮಿಸಿದ್ದೇನೆ. ಕೋವಿಡ್ ವೇಳೆ ಅನುದಾನ ಇರಲಿಲ್ಲ. ಹೀಗಾಗಿ ನನ್ನ ಸಂಬಳ ಹಣ ಸರ್ಕಾರಕ್ಕೆ ಕೊಟ್ಟಿದ್ದೇನೆ. ವಿಕಲಚೇತನರಿಗೆ ಎಲೆಕ್ಟ್ರಿಕ್ ವಾಹನ,  26 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ. 60ಕ್ಕೂ ಸಮುದಾಯ ಭವನ,  5 ಬಸ್ ನಿಲ್ದಾಣ.  ಶಿಥೀಲಾವಸ್ಥೆಯಲ್ಲಿದ್ದ ಕೇಂದ್ರೀಯ ವಿದ್ಯಾಲಯ ದುರಸ್ತಿ ಮಾಡಿಸಿದೆ. ದಿಶಾ ಸಭೆ ಮೂಲಕ ಜಿಲ್ಲೆಯ ಪ್ರಗತಿ ಬಗ್ಗೆ ಪರಿಶೀಲನೆ  ಮಾಡಿದ್ದೇವೆ. ನಾನು ಕ್ರೆಡಿಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸ ಮಾಡುವುದು ನನ್ನ ಕರ್ತವ್ಯ. ಮಂಡ್ಯ ಜಿಲ್ಲೆಯಲ್ಲಿ 632 ಮನೆಗಳು ಸಿಕ್ಕಿವೆ.  ನನ್ನ ನೇತೃತ್ವದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ ಎಂದು ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸುತ್ತಾ ಜೆಡಿಎಸ್ ಗೆ ಟಾಂಗ್ ನೀಡಿದರು.

Key words: leadership, – lot of development- Sumalata Ambarish -Tong – JDS leaders.