ಮೂರು ವರ್ಷದಲ್ಲಿ 90 ಲಕ್ಷ ರೂ. ಲಂಚ ಸ್ವೀಕಾರ:ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗಂಭೀರ ಆರೋಪ.

ಬೆಂಗಳೂರು,ಜನವರಿ,16,2023(www.justkannada.in):  ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚ ಸ್ವೀಕಾರ ಮಾಡಿದ ಆರೋಪ ಕೇಳಿ ಬಂದಿದೆ.

ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚ ಪಡೆದ ಆರೋಪ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಭ್ರಷ್ಟಾಚಾರ ಇರೋದು ಸತ್ಯ. ಶಾಸಕ ತಿಪ್ಪಾರೆಡ್ಡಿಗೆ ಮೂರು ವರ್ಷದಲ್ಲಿ 90 ಲಕ್ಷ ರೂ. ಕಮಿಷನ್ ನೀಡಿದ್ದೇನೆ. ಪಿಡಬ್ಲ್ಯುಡಿ ಕಟ್ಟಡ ಕಾಮಗಾರಿಗೆ 12.5 ಲಕ್ಷ ರೂ,  ಮೆಡಿಕಲ್ ಗ್ಯಾಸ್ ಪೈಪ್ ಲೈನ್ ಗೆ 4 ಲಕ್ಷ , ಕೋವಿಡ್ ವೇಳೆ 22 ಲಕ್ಷ, ಆಸ್ಪತ್ರೆ ಕಟ್ಟಡ ಕಾಮಗಾರಿಗೆ 1.5 ಲಕ್ಷ  ರೂ ಲಂಚ ಸ್ವೀಕಾರ ಮಾಡಿದ್ದಾರೆ ಎಂದು ಆರೋಪಿಸಿದರು.

14 ಜನ ಶಾಸಕರ ಲಂಚ ದಾಖಲೆಗಳು ಇದೆ. ಸಂತೋಷ್ ಕೇಸ್ ನಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. ನಮ್ಮ ಅಧ್ಯಕ್ಷರನ್ನ ಅರೆಸ್ಟ್ ಮಾಡಿದ್ದಾರೆ. ಸಂತೋಷ ಪಾಟೀಲ್‌ ದು ಏನ್ ಆಗಿತ್ತು? ನಾವು ಒಂದು ದಾಖಲೆ ಬಿಡುಗಡೆ ಮಾಡ್ತೇನೆ. ನಮ್ಮ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು ತಿಪ್ಪಾರೆಡ್ಡಿ ಅವರು ಶುರುಮಾಡಿದ್ದಾರೆ. ಲಂಚ ಶುರುಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ. ತಿಪ್ಪಾರೆಡ್ಡಿ ಅವರು ಲಂಚ ಪಡೆದಿರುವ ಬಗ್ಗೆ ಆಡಿಯೋ ಇದೆ, ವಾಟ್ಸ್ ಆ್ಯಪ್ ರೆಕಾರ್ಡ್ ಕೂಡಾ ಇದೆ. ಶೇ. 25% ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಂಜುನಾಥ್  ದೂರಿದರು.

Key words: MLA Tippareddy – corruption contractor- association-Manjunath