ಪಿಂಪ್ ಗಳಿಂದ ಹಣ ಮಾಡಿಕೊಳ್ಳುವ ಸ್ಥಿತಿ ಬಂದರೇ ಆತ್ಮಹತ್ಯೆ- ಗೃಹ ಸಚಿವ ಅರಗ ಜ್ಞಾನೇಂದ್ರ

ಶಿವಮೊಗ್ಗ,ಜನವರಿ,16,2023(www.justkannada.in): ಪಿಂಪ್ ಗಳಿಂದ ನಾನು ಹಣ ಮಾಡಲ್ಲ. ಅಂತಹ ಸ್ಥಿತಿ ಬಂದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಸ್ಯಾಂಟ್ರೋ  ರವಿ ಯಾರೆಂಬುದೇ ನನಗೆ ಗೊತ್ತಿಲ್ಲ. ರವಿ ನನ್ನೆದುರು ಬಂದರೆ ಗುರುತು ಹಿಡಿಯಲಾರೆ.  ನನ್ನ ನಿವಾಸಕ್ಕೆ ಸಾವಿರಾರು ಜನರು ಬಂದು ಹೋಗುತ್ತಾರೆ. ಎಲ್ಲರ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೋಡಿ ಒಳಗೆ ಬಿಡಲು ಆಗಲ್ಲ ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಸೃಷ್ಠಿ ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. 

ಗುಜರಾತ್ ನಲ್ಲಿ ನನ್ನ ಕಾರ್ಯಕ್ರಮ 6 ತಿಂಗಳ ಹಿಂದೆ ನಿಗದಿಯಾಗಿತ್ತು. ನಾನು ಎಲ್ಲಿಗೆ ಹೋಗಿದ್ದೆ ಎಂಬ ಮಾಹಿತಿ ಸರ್ಕಾರದಲ್ಲಿರುತ್ತೆ. ಪಿಎಸ್ ಐ ಹಗರಣದಲ್ಲಿ ಸಾಕ್ಷ್ಯ ಸಿಕ್ತಿದಂತೆ ತನಿಖೆ  ನಡೆಸಿದ್ದೇವೆ. 107 ಜನರನ್ನ ಅರೆಸ್ಟ್ ಮಾಡಿಸಿದ್ದೇನೆ. ಐಎಎಸ್ ಅಧಿಕಾರಿಯನ್ನ ಬಂಧಿಸಿದ್ದೇನೆ. ನಾನು ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ.  ‘ನನಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದರು.

Key words: Home Minister -Araga Jnanendra – suicide – money – pimps