ಮಂಡ್ಯ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆ: ಸುಮಲತಾ ಅಂಬರೀಶ್ ನಿರ್ಧಾರಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿಲ್ಲ- ಬಿಕೆ ಹರಿಪ್ರಸಾದ್.

ಬೆಂಗಳೂರು,ಮಾರ್ಚ್,10,2023(www.justkannada.in): ಮಂಡ್ಯ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆ. ಹೀಗಾಗಿ ಸಂಸದೆ ಸುಮಲತಾ ಅಂಬರೀಶ್ ನಿರ್ಧಾರಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ನುಡಿದರು.

ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್,  ಕಳೆದ ಬಾರಿ ಅಂಬರೀಶ್ ಧರ್ಮಪತ್ನಿ ಎಂಬ ಅನುಕಂಪ ಇತ್ತು. ಆದರೆ ಮಂಡ್ಯ ಜಿಲ್ಲೆ ಜನರು ಪ್ರಬುದ್ಧರು. ಮಂಡ್ಯ ಕಾಂಗ್ರೆಸ್ ಜೆಡಿಎಸ್ ಪಕ್ಷದ ಭದ್ರಕೋಟೆ.  ಸಂಸದೆ ಸುಮಲತಾ  ಅಂಬರೀಶ್ ನಿರ್ಧಾರಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿಲ್ಲ. ಏನೇ ಸರ್ಕಸ್ ಮಾಡಿದರೂ ಬಿಜೆಪಿ 60 ಸೀಟ್ ಮೇಲೆ ಹೋಗಲ್ಲ ಎಂದು ಭವಿಷ್ಯ ನುಡಿದರು.

ಮಂಡ್ಯ ಜಿಲ್ಲೆಯ ಜನರ ತೀರ್ಮಾ ಅಂತಿಮವಾಗಿರುತ್ತದೆ. ಬಿಜೆಪಿಯವರು ತ್ರಿಕೋನ ಸ್ಪರ್ಧೆಯಾಗುತ್ತದೆ ಎಂದು ಕಾಯುತ್ತಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಟೀಕಿಸಿದರು.

Key words: Mandya-Congress-JDS- Sumalatha Ambarish- decision -BK Hariprasad.