ಪ್ರಧಾನಿ ಮೋದಿ ಸರ್ಕಾರಕ್ಕೆ ಜೈ ಎಂದ ಸಂಸದೆ ಸುಮಲತಾ ಅಂಬರೀಶ್: ಬಿಜೆಪಿಗೆ ಬೆಂಬಲ ಘೋಷಣೆ.

ಮಂಡ್ಯ,ಮಾರ್ಚ್,10,2023(www.justkannada.in):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ ಎಂದು ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.

ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,  ಮಂಡ್ಯ ಅಭಿವೃದ್ದಿ ಬಗ್ಗೆ ಪ್ರಧಾನಿ ಮೋದಿಗೆ ಕಾಳಜಿ ಇದೆ. ಹೀಗಾಗಿ ನನ್ನ  ಸಂಪೂರ್ಣ ಬೆಂಬಲ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಎಂದು ಘೋಷಿಸಿದರು.

ಅಂಬಿ ಕುಟುಂಬ ದ್ವೇಷದ ರಾಜಕಾರಣ ಮಾಡಲ್ಲ. ಪಕ್ಷೇತರ ಸಂದೆಯಾದರೂ  ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹೆಚ್ಚು ಅನುದಾನ ನೀಡಿದ್ದಾರೆ. ಮೋದಿ ನಾಯಕತ್ವದಲ್ಲಿ  ದೇಶ ಸಾಗುತ್ತಿದೆ. ಜಿಲ್ಲೆಯ ಭವಿಷ್ಯದ ದೃಷ್ಠಿಯಿಂದ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇನೆ ಎಂದರು.

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಪುತ್ರ ರಾಜಕೀಯಕ್ಕೆ ಬರಲ್ಲ.

ಚಾಮುಂಡಿ ತಾಯಿ ಮೇಲೆ ಆಣೆ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ಮಾಡಲ್ಲ ನನಗೆ ಅಂಬರೀಶ್ ಹೆಸರೂ ಉಳಿಯಬೇಕು. ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಪುತ್ರ ರಾಜಕಾರಣಕ್ಕೆ ಬರೋದಿಲ್ಲ. ನಾನು ಇರುವವರೆಗೂ  ಅಭಿಷೇಕ್ ರಾಜಕಾರಣಕ್ಕೆ ಹೆಜ್ಜೆ ಇಡೋದಿಲ್ಲ ಎಂದರು.

Key words: Mandya-MP -Sumalata Ambarish – Support – BJP.