Sunday, August 16, 2026

BDA Apartments

Home Front Page ಚೆಕ್ ಬೌನ್ಸ್  ಪ್ರಕರಣದಲ್ಲಿ ಶಾಸಕ ಕೆ.ವೈ.ನಂಜೇಗೌಡರಿಗೆ 49.65 ಲಕ್ಷ ರೂ. ದಂಡ.

ಚೆಕ್ ಬೌನ್ಸ್  ಪ್ರಕರಣದಲ್ಲಿ ಶಾಸಕ ಕೆ.ವೈ.ನಂಜೇಗೌಡರಿಗೆ 49.65 ಲಕ್ಷ ರೂ. ದಂಡ.

ಬೆಂಗಳೂರು,ಡಿಸೆಂಬರ್,17,2022(www.justkannada.in):  ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ತಪ್ಪಿತಸ್ಥ ಎಂದು  ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿ 49.65 ಲಕ್ಷ ರೂ. ದಂಡ ವಿಧಿಸಿದೆ.

ಶಾಸಕ ಕೆ.ವೈ.ನಂಜೇಗೌಡ ಅವರು, ರಾಮಚಂದ್ರ.ಜಿ ಎಂಬುವರಿಂದ 40 ಲಕ್ಷ ರೂ. ಸಾಲ ಪಡೆದಿದ್ದರು. ಈ ನಡುವೆ ಸಾಲ ಮರುಪಾವತಿಗೆ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ.

ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಚೆಕ್ ಬೌನ್ಸ್ ಕೇಸ್​​ನಲ್ಲಿ ಕೆ.ವೈ.ನಂಜೇಗೌಡ ಅವರಿಗೆ 49.65 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಜಡ್ಜ್ ಜೆ.ಪ್ರೀತ್ ಆದೇಶ ಹೊರಡಿಸಿದ್ದಾರೆ.

Key words: check -bounce –case-49.65 lakhs –fine-MLA- KY Nanje Gowda