Sunday, August 23, 2026

BDA Apartments

Home Cinema ಅಕ್ಷಯ ತೃತೀಯ ವಿಶೇಷ: ಮಗಳ ಫೋಟೋ ಹಂಚಿಕೊಂಡ ಯಶ್-ರಾಧಿಕಾ

ಅಕ್ಷಯ ತೃತೀಯ ವಿಶೇಷ: ಮಗಳ ಫೋಟೋ ಹಂಚಿಕೊಂಡ ಯಶ್-ರಾಧಿಕಾ

ಬೆಂಗಳೂರು, ಮೇ 07, 2019 (www.justkannada.in): ಅಕ್ಷಯ ತೃತೀಯ ವಿಶೇಷವಾಗಿ ಮಗಳ ಫೋಟೋ ಹಂಚಿಕೊಳ್ಳುವುದಾಗಿ ರಾಧಿಕಾ ಪಂಡಿತ್ ಕೆಲ ದಿನಗಳ ಳಿಸಿದ್ದರು. ಅದೇ ರೀತಿ ಈಗ ಯಶ್ ಹಾಗೂ ರಾಧಿಕಾ ತಮ್ಮ ಪ್ರೀತಿಯ ಕಂದನ ಚಿತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

”ನೀವು ಹೇಳಿದ್ದೇ ಸರಿ..ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ” ಎಂದು ಯಶ್ ನಾಲ್ಕು ಸಾಲು ಬರೆದಿದ್ದಾರೆ.

ಅಕ್ಷಯ ತೃತೀಯ ದಿನ ಚಿನ್ನವನ್ನು ಕೊಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಈ ದಿನ ತಮ್ಮ ಮನೆಯ ಚಿನ್ನವನ್ನು ಅಭಿಮಾನಿಗಳಿಗೆ ರಾಕಿಂಗ್ ದಂಪತಿ ತೋರಿಸುತ್ತಿದ್ದಾರೆ.