ಉಪೇಂದ್ರ ‘ಐ ಲವ್ ಯು’ಗೆ ಯು/ಎ ಸರ್ಟೀಫಿಕೇಟ್ !

0
1316

ಬೆಂಗಳೂರು, ಮೇ 07, 2019 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಐ ಲವ್ ಯು’ಗೆ ಸೆನ್ಸಾರ್ ಮಂಡಳಿ ಸರ್ಟೀಫಿಕೇಟ್ ನೀಡಿದೆ.

ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ‘ಐ ಲವ್ ಯು’ ಸಿನಿಮಾ ಸದ್ಯ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ. ಟ್ರೈಲರ್ ಮತ್ತು ಟೀಸರ್ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಸದ್ಯ ರಿಲೀಸ್ ಗೆ ಎದುರು ನೋಡುತ್ತಿರುವ ‘ಐ ಲವ್ ಯು’ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಯಾವುದೆ ಕತ್ತರಿ ಪ್ರಯೋಗವಿಲ್ಲದೆ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ.