Sunday, August 2, 2026

BDA Apartments

Home Front Page ಪ್ರತಿಪಕ್ಷ ನಾಯಕ ಸ್ಥಾನ ವಿಚಾರ: ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಾಸಕ ರಮೇಶ್...

ಪ್ರತಿಪಕ್ಷ ನಾಯಕ ಸ್ಥಾನ ವಿಚಾರ: ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಾಸಕ ರಮೇಶ್ ಕುಮಾರ್…

ಕೋಲಾರ,ಆ,3,2019(www.justkannada.in): ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಸೂಕ್ತ ವ್ಯಕ್ತಿ ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಕುಮಾರ್ ಅವರು,ವಿಪಕ್ಷನಾಯಕ ಸ್ಥಾನಕ್ಕೆ ಸಿದ್ದರಾಮಯ್ಯಗಿಂತ ಸೂಕ್ತ ವ್ಯಕ್ತಿ  ನಮ್ಮ ಪಕ್ಷದಲ್ಲಿಲ್ಲ.  ಪಕ್ಷವನ್ನು ಸಮರ್ಥವಾಗಿ  ನಡೆಸಲು ಸಿದ್ಧರಾಮಯ್ಯ ಯೋಗ್ಯ ವ್ಯಕ್ತಿ ಎಂದು ತಿಳಿಸಿದರು.

ಹಾಗೆಯೇ ಪ್ರತಿಪಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ರಮೇಶ್ ಕುಮಾರ್,  ವಿಪಕ್ಷ ಸ್ಥಾನ ನನಗೆ ನೀಡುವ ವಿಚಾರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಇದೆಲ್ಲಾ ಊಹಪೂಹ. ಪಕ್ಷ ನನಗೆ ನೀಡುವ ಕೆಲಸವನ್ನ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

Key words: position -opposition leader-Ramesh Kumar- former CM- Siddaramaiah