ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಬಿಸಿಯೂಟ ತಯಾರಿಕಾ ಅಡುಗೆ ಸಿಬ್ಬಂದಿಗಳಿಂದ ಪ್ರತಿಭಟನೆ..

ಮೈಸೂರು,ಆ,3,2019(www.justkannada.in): ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಸಿ ಬಿಸಿಯೂಟ ತಯಾರಿಕ ಅಡುಗೆ ಸಿಬ್ಬಂದಿಗಳು ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನೆ ಬಿಸಿಯೂಟ ತಯಾರಿಕ ಅಡುಗೆ ಸಿಬ್ಬಂದಿಗಳು,  ನಗರ ಪ್ರದೇಶದಲ್ಲಿ ಬಿಸಿಯೂಟ ತಯಾರಿಕೆಯನ್ನ ಖಾಸಗಿ ಸಂಸ್ಥೆಗೆ ನೀಡಲಾಗುತ್ತಿದೆ. ಇದರಿಂದ ಅನೇಕ ಜನರು ಕೆಲಸ ಕಳೆದು ಕೊಳ್ಳುವ ಭಯದಲ್ಲಿ ಇದ್ದಾರೆ.. ಜೊತೆಗೆ ಬಿಸಿಯೂಟ ತಯಾರಿಕೆ  ಮಾಡುವವರಿಗೆ ನೀಡಲಾಗುತ್ತಿರುವ ಸಂಬಳ ತೀರ ಕಡಿಮೆ ಇದೆ. ಕೇವಲ 2700 ಮಾತ್ರ ನೀಡುತ್ತಿದ್ದಾರೆ. ಅಡುಗೆ ಸಿಬ್ಬಂದಿಗಳಿಗೆ ಕನಿಷ್ಠ ವೇತನವನ್ನ 18 ಸಾವಿರ ನೀಡಬೇಕು ಎಂದು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಹಾಗೆಯೇ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ  ಸೌಕರ್ಯಗಳನ್ನು ಅಡುಗೆ ಸಿಬ್ಬಂದಿಗಳಿಗೂ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Key words: mysore- Protests cooking-staff-  demanding fulfillment – various demands.