ಕೊಡಗು ಡ್ರಗ್ಸ್ ಪತ್ತೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

ಕೊಡಗು, ಸೆಪ್ಟೆಂಬರ್, 16,2020(www.justkannada.in) : ಕೊಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಲಾಗಿದೆ.

jk-logo-justkannada-logo

ಕೊಡಗು ಡಿಸಿಐಬಿ ಪೊಲೀಸರು ಆಗಸ್ಟ್ 28ರ ರಾತ್ರಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಬಾಣಸವಾಡಿ ನಿವಾಸಿಗಳಾದ ಮಹಮ್ಮದ್ ಫೈಸಲ್(19), ಸಾರಾ ಖಾನ್(18) ಆರೋಪಿಗಳನ್ನು ಬಂಧಿಸಿದ್ದಾರೆ.

Kodagu-absconding-drug-dealing-case-custody- two

ಕಾರ್ಯಚರಣೆ ವೇಳೆ ಮೂವರನ್ನು  ಪೊಲೀಸರು ಬಂಧಿಸಿದ್ದರು. ಇಬ್ಬರು ತಪ್ಪಿಸಿಕೊಂಡಿದ್ದರು. 7.5 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದಲ್ಲಿ ಒಟ್ಟು ಐವರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

key words : Kodagu-absconding-drug-dealing-case-custody- two