Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ಸಾಂಸ್ಕೃತಿಕ ನಗರಿಯಲ್ಲಿಂದು ರಾಜಕೀಯ ನಾಯಕರ ದಂಡು: ಪೊಲಿಟಿಕಲ್ ಸೆಂಟರ್ ಆದ ಮೈಸೂರು.

ಸಾಂಸ್ಕೃತಿಕ ನಗರಿಯಲ್ಲಿಂದು ರಾಜಕೀಯ ನಾಯಕರ ದಂಡು: ಪೊಲಿಟಿಕಲ್ ಸೆಂಟರ್ ಆದ ಮೈಸೂರು.

ಮೈಸೂರು,ಮಾರ್ಚ್,27,2024, (www.justkannada.in): ಲೋಕಸಭೆ ಚುನಾವಣೆಯ ಕಣ ರಂಗೇರಿದ್ದು ಸಾಂಸ್ಕೃತಿಕನಗರಿ ಮೈಸೂರಿಗೆ  ಇಂದು ರಾಜಕೀಯ ನಾಯಕರ ದಂಡೇ ಆಗಮಿಸುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಸಾಲು ಸಾಲು ಪ್ರಮುಖ ನಾಯಕರು ಭೇಟಿ ನೀಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೂರು ದಿನದ ರೆಸಾರ್ಟ್ ವಾಸ್ತವ್ಯ ಮುಗಿಸಿ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು, ಇಂದು ಬೆಳಗ್ಗೆ  ಕೃಷ್ಣರಾಜ ಕ್ಷೇತ್ರದ ಭೂತಾಳೆ ಪಿಚ್‌ನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ, ಜೆಡಿಎಸ್ ತೊರೆದು ಎಚ್.ವಿ.ರಾಜೀವ್, ಸದಾನಂದ, ಬಿ.ಎಲ್.ಭೈರಪ್ಪ, ಕೆ.ವಿ.ಮಲ್ಲೇಶ್, ಓಂಪ್ರಕಾಶ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ನಂತರ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಚೇರಿಯಲ್ಲಿ ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಕಲಾ ಮಂದಿರದಲ್ಲಿ ನಾ ಕಂಡ ಸಿದ್ದರಾಮಯ್ಯ ಪುಸ್ತಕ ಬಿಡುಗಡೆಯಾಗಲಿದೆ.ಸಾಂಸ್ಕೃತಿಕ ನಗರಿಯಲ್ಲಿಂದು ರಾಜಕೀಯ ನಾಯಕರ ದಂಡು: ಪೊಲಿಟಿಕಲ್ ಸೆಂಟರ್ ಆದ ಮೈ...

ಮತ್ತೊಂದೆಡೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ನಾಯಕರೂ ಸಹ ಮೈಸೂರಿನಲ್ಲಿ ಸಮಾಗಮವಾಗುತ್ತಿದ್ದು, ಇಂದು ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದಾರೆ. ಸಂಜೆ 4 ಗಂಟೆಗೆ ಖಾಸಗಿ ಹೋಟೆಲ್‌‌ನಲ್ಲಿ ಮಾಜಿ ಸಿಎಂ ಎಚ್.ಡಿ‌.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಮೈತ್ರಿ ನಾಯಕರ ಸಭೆ ನಡೆಯಲಿದ್ದು,  ಸಂಜೆ 5ಕ್ಕೆ ವಸ್ತು ಪ್ರದರ್ಶನ ಮೈದಾನದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದೆ.   ಉಭಯ ಪಕ್ಷಗಳ ನಾಯಕರು, ಅಭ್ಯರ್ಥಿಗಳಾದ ಯದುವೀರ್, ಬಾಲರಾಜ್ ಸೇರಿದಂತೆ ಪ್ರಮುಖರು ಸಾಥ್ ನೀಡಲಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮೈಸೂರು ಪೊಲಿಟಿಕಲ್ ಸೆಂಟರ್ ಆಗಿ ಮಾರ್ಪಟ್ಟಿದೆ.

Key words: political,leaders,Mysore