ಮಲೆ ಮಾದಪ್ಪನ ಹುಂಡಿಯಲ್ಲಿ ದಾಖಲೆಯ 3.13 ಕೋಟಿ ಹಣ ಸಂಗ್ರಹ.

ಚಾಮರಾಜನಗರ,ಮಾರ್ಚ್,27,2024(www.justkannada.in): ಹನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಾಸಿಕ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 25 ದಿನದಲ್ಲಿ ದಾಖಲೆಯ 3.13 ಕೋಟಿ ಹಣ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ಎ.ಈ ರಘು ಮತ್ತು ನೂರಾರು ಸಿಬ್ಬಂದಿಗಳ ಸಮ್ಮುಖದಲ್ಲಿ ನಿನ್ನೆ ಮುಂಜಾನೆಯಿಂದ ರಾತ್ರಿ 11 ರವರೆಗೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಹಾ ಶಿವರಾತ್ರಿ, ರಜಾ ದಿನಗಳು ಮತ್ತು ಶಕ್ತಿ ಯೋಜನೆ ಹಿನ್ನೆಲೆ, ಶ್ರೀಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಹರಿದು ಬಂದಿದ್ದು, ಹುಂಡಿ ಹಣದಲ್ಲೂ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.

ಹುಂಡಿಯಲ್ಲಿ ಬರೋಬ್ಬರಿ 3,13,00,913 ರೂ ನಗದು, 47 ಗ್ರಾಂ ಚಿನ್ನ, 2 ಕೆಜಿ 309 ಗ್ರಾಂ ಬೆಳ್ಳಿ ಸಂಗ್ರಹವಾಗಿದ್ದು, ಹುಂಡಿಯಲ್ಲಿ ರದ್ದಾದ 2 ಸಾವಿರ ಮುಖ ಬೆಲೆಯ 26  ನೋಟುಗಳು ಜೊತೆಗೆ ಬಾಂಗ್ಲಾ, ನೇಪಾಳ,ಮಲೇಷಿಯಾ  ದೇಶದ 7 ನೋಟುಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

Key words: money,Male Mahadeshwara hills