ದೇಶದ ಮೊಟ್ಟ ಮೊದಲ ಮಹಿಳಾ ಸೇನಾ ಭರ್ತಿ ರ್ಯಾಲಿಗೆ ಸಾಕ್ಷಿಯಾದ ಬೆಳಗಾವಿ…

ಬೆಳಗಾವಿ,ಆ,1,2019(www.justkannada.in):  ಕೇವಲ ಪುರುಷ ಸಮಾಜಕ್ಕೆ ದೇಶದ ಗಡಿ ಕಾಯುವ ಕೆಲಸಕ್ಕೆ ಇದೀಗ ಮಹಿಳೆಯರಿಗೂ ಅವಕಾಶ ಮಾಡಿಕೊಡಲಾಗಿದ್ದು, ಭಾರತೀಯ ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಎನ್ನುವ ನೂರಾರು ಯುವತಿಯರು ಇದೀಗ ಕುಂದಾ ನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಸೇನಾಭರ್ತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜನೆ ಮಾಡಿರುವ ಮಹಿಳಾ ಸೇನಾ ಭರ್ತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ನೂರಾರು ಜನ ಯುವತಿಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ದೇಶದ ಮೊಟ್ಟ ಮೊದಲ ಮಹಿಳಾ ಸೇನಾ ಭರ್ತಿ ರ್ಯಾಲಿಗೆ  ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ.

ಬೆಳಗಾವಿಯ ಎಂ.ಎಲ್. ಐ.ಆರ್. ಸಿ ಕೇಂದ್ರದಲ್ಲಿ ಮಹಿಳಾ ಸೇನಾ ಭರ್ತಿ ನಡೆಯುತ್ತಿದ್ದು,  ಕರ್ನಾಟಕ, ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಮಹಿಳಾ ಆಕಾಂಕ್ಷೆಗಳು ಭಾಗಿಯಾಗಿದ್ದಾರೆ. ಇಂದಿನಿಂದ ಅಗಸ್ಟ್ 5ರವರೆಗೂ ಈ ರ್ಯಾಲಿ ನಡೆಯಲಿದೆ. ರ್ಯಾಲಿಗೆ ಹೆಸರು ನೊಂದಾಯಿಸಿಕೊಂಡ 15ಸಾವಿರ ಅಭ್ಯರ್ಥಿಗಳ ಪೈಕಿ, 3ಸಾವಿರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

Key words: Belgavi -first -women’s- army rally – country