ಸರ್ಕಾರ ಈ ದುಸ್ಥಿತಿಗೆ ಬರಲು ಹೆಚ್.ಡಿ ರೇವಣ್ಣ, ಸಿಎಂ ಕುಮಾರಸ್ವಾಮಿ ಅವರೇ ಕಾರಣ- ಸಚಿವ ಎಂಟಿಬಿ ನಾಗರಾಜ್ ಕಿಡಿ..

ಬೆಂಗಳೂರು,ಜು10,2019(www.justkannada.in): ಸಿಎಂ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣರಿಂದಲೇ ಸರ್ಕಾರಕ್ಕೆ ಈ ದುಸ್ಥಿತಿ ಬಂದಿದೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಡಳಿತದಿಂದ ಬೇಸತ್ತು ಅತೃಪ್ತರು ಹೋಗಿದ್ದಾರೆ. ಅಸಮಾಧಾನ ಇರುವುದಕ್ಕೆ ಅವರು ಹೋಗಿದ್ದಾರೆ ಅವರು ದುಡ್ಡಿಗಾಗಿ ಹೋದವರಲ್ಲ ಅವರ ಬಳಿ ದುಡ್ಡು ಇದೆ.  ಅತೃಪ್ತರನ್ನ ಮನವೊಲಿಸಿ ಡಿ.,ಕೆ ಶಿವಕುಮಾರ್ ಕರೆತರುತ್ತಾರೆ ಎಂದು ಹೇಳಿದರು.

ಜೆಡಿಎಸ್ ನವರ ಸರ್ವಾಧಿಕಾರಿ ಧೋರಣೆಗಳೇ ಇದಕ್ಕೆಲ್ಲಾ ಕಾರಣ. ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡಲಿಲ್ಲ.  ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲ. ತಮಗಿಷ್ಟ ಬಂದಂತೆ ಅಧಿಕಾರಿಗಳನ್ನ ವರ್ಗಾವಣೆ ಮಾಡಿದರು. ಹೀಗಾಗಿ ಅಸಮಾಧಾನ ಉಂಟಾಗಿದೆ ಎಂದು ಎಂಟಿಬಿ ನಾಗರಾಜ್ ಸಿಎಂ ಹೆಚ್.ಡಿ ಕೆ ವಿರುದ್ದ ವಾಗ್ದಾಳಿ ನಡೆಸಿದರು.

Key words: HD Revanna – CM Kumaraswamy – reason – government -this situation- MTB Nagaraj