Sunday, September 20, 2026

BDA Apartments

ವಿಂಬಲ್ಡನ್ ಟೆನಿಸ್ ಅಂಗಣಕ್ಕೆ ಹಾನಿ: ಸೆರೆನಾಗೆ 10 ಸಾವಿರ ಡಾಲರ್ ದಂಡ BDA JK_Adv BDA Adv
Home Front Page ವಿಂಬಲ್ಡನ್ ಟೆನಿಸ್ ಅಂಗಣಕ್ಕೆ ಹಾನಿ: ಸೆರೆನಾಗೆ 10 ಸಾವಿರ ಡಾಲರ್ ದಂಡ

ವಿಂಬಲ್ಡನ್ ಟೆನಿಸ್ ಅಂಗಣಕ್ಕೆ ಹಾನಿ: ಸೆರೆನಾಗೆ 10 ಸಾವಿರ ಡಾಲರ್ ದಂಡ

ಲಂಡನ್, ಜುಲೈ 10, 2019 (www.justkannada.in):ವಿಂಬಲ್ಡನ್ ಟೆನಿಸ್ ಅಂಗಣಕ್ಕೆ ಹಾನಿ ಮಾಡಿರುವ ಆರೋಪದಲ್ಲಿ ಅಮೆರಿಕದ ಹಿರಿಯ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ಗೆ 10 ಸಾವಿರ ಡಾಲರ್ ದಂಡ ವಿಧಿಸಲಾಗಿದೆ.

24ನೇ ಗ್ರಾನ್‌ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಸೆರೆನಾ ಆಟ ಆರಂಭಕ್ಕೂ ಮುನ್ನ ರಾಕೆಟ್‌ನ್ನು ಟೆನಿಸ್ ಕೋರ್ಟ್‌ಗೆ ಬಡಿದು ಹಾನಿಯನ್ನುಂಟು ಮಾಡಿದ್ದರು ಎನ್ನಲಾಗಿದೆ. ಆದರೆ ದಂಡ ವಿಧಿಸಿರುವ ವಿಚಾರದಲ್ಲಿ ಸೆರೆನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫ್ಯಾಬಿಯೊ ಫೊಗ್ನಿನಿ ಅವರಿಗೂ ಮೂರನೇ ಸುತ್ತಿನಲ್ಲಿ ಟೆನ್ಯಾ ಸ್ಯಾಂಡ್‌ಗ್ರೆನ್ ವಿರುದ್ಧ ಸೋಲಿನ ಬಳಿಕ ಕ್ರೀಡಾಮನೋಭಾವಕ್ಕೆ ವಿರುದ್ಧ ನಡವಳಿಕೆಗಾಗಿ 3 ಸಾವಿರ ಡಾಲರ್ ದಂಡ ವಿಧಿಸಲಾಗಿದೆ.