Thursday, August 6, 2026

BDA Apartments

Home Front Page ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಆರೋಪ: ಸಿದ್ಧರಾಮಯ್ಯ ಮತ್ತು ಹೆಚ್.ಡಿಕೆಗೆ ತಿರುಗೇಟು ನೀಡಿದ ಎಂಎಲ್ ಸಿ...

ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಆರೋಪ: ಸಿದ್ಧರಾಮಯ್ಯ ಮತ್ತು ಹೆಚ್.ಡಿಕೆಗೆ ತಿರುಗೇಟು ನೀಡಿದ ಎಂಎಲ್ ಸಿ ಹೆಚ್.ವಿಶ್ವನಾಥ್.

ಮೈಸೂರು,ಅಕ್ಟೋಬರ್,11,2021(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಕಂಡು ಬರುತ್ತಿದೆ ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕರಿಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್,  ಯಾರನ್ನ ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದೀರಾ. ಬಿಎಸ್ ಯಡಿಯೂರಪ್ಪ ಅವರೇ ಐಟಿ ದಾಳಿಯನ್ನ ಸ್ವಾಗತಿಸಿದ್ದಾರೆ.  ಕುಮಾರಸ್ವಾಮಿ ಸಿದ್ದರಾಮಯ್ಯ ಅವರದ್ದೇನು ಆರೋಪ. ಇಂತಹ ಬೂಟಾಟಿಕೆ ಹೇಳಿಕೆಗ ಬಗ್ಗೆ  ಜನರು ನಗುತ್ತಾರೆ. ಐಟಿ ಇಡಿ ದಾಳಿ ಬಗ್ಗೆ ಲಘುವಾಗಿ ಮಾತನಾಡಬೇಕಡಿ  ಹೇಳಿಕೆ ಕೊಡುವಾಗ ಎಚ್ಚರ ವಹಿಸಿ ಎಂದು ಇಬ್ಬರು ನಾಯಕರಿಗೆ ಸಲಹೆ ನೀಡಿದರು.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಉಮೇಶ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

Key words: Political- smell -allegation – IT attack-MLC H Vishwanath-former CM- Siddaramaiah