ನಟ  ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ.

ಮುಂಬೈ,ಅಕ್ಟೋಬರ್,11,2021(www.justkannada.in):  ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ಶಾರೂಖ್‌ ಖಾನ್  ಪುತ್ರ ಆರ್ಯನ್‌ ಜಾಮೀನು ಅರ್ಜಿ ವಿಚಾರಣೆಯನ್ನ  ಮುಂಬೈ ಸೆಷನ್ಸ್ ಕೋರ್ಟ್ ಮುಂದೂಡಿಕೆ ಮಾಡಿದೆ.

ಆರ್ಯನ್ ಖಾನ್ ಪರ ವಕೀಲರು ಸಲ್ಲಿಸಿದ್ಧ ಜಾಮೀನು ಅರ್ಜಿ ವಿಚಾರಣೆಯನ್ನ ಕೋರ್ಟ್ ಬುಧವಾರಕ್ಕೆ ಮುಂದೂಡಿಕೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಗೆ ಎರಡು ದಿನಗಳ ಕಾಲ ಜೈಲೇ ಗತಿಯಾಗಿದೆ.

 ಸದ್ಯ ಮುಂಬೈನ ಅರ್ಥರ್‌ ಜೈಲಿನಲ್ಲಿ ಆರ್ಯನ್‌ ಇದ್ದು, ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡಲು ಗುರವಾರದವರೆಗೆ ಕಾಲಾವಕಾಶ ನೀಡುವಂತೆ  ಎನ್ ಸಿಬಿ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಎರಡು ದಿನಗಳ ಕಾಲ ಕಾಲಾವಕಾಶ ನೀಡಿ ಜಾಮೀನು ಅರ್ಜಿ ವಿಚಾರಣೆಯನ್ನ ಬುಧವಾರಕ್ಕೆ ಮುಂದೂಡಿದೆ.

Key words: actor -Shah Rukh Khan son — Aryan Khan-bail-application -postponed