ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ…

ನವದೆಹಲಿ, ಜೂ,10,2020(www.justkannada.in):  ದೇಶದಲ್ಲಿ ಕೊರೋನಾ ಸಂಕಷ್ಟದ ನಡುವೆ ಇಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ  ಪ್ರತಿಲೀಟರ್ ಗೆ 40 ಪೈಸೆ ಹಾಗೂ ಡೀಸೆಲ್ ದರ ಪ್ರತಿಲೀಟರ್ ಗೆ 45 ಪೈಸೆ ಹೆಚ್ಚಾಗಿದೆ.petrol-diesel-prices-increase

ಪೆಟ್ರೋಲ್ 73 ರುಪಾಯಿಯಿಂದ 73.40 ರುಪಾಯಿಗೆ ತಲುಪಿದೆ. ಹಾಗೆಯೇ ಡಿಸೇಲ್ 71.17 ರುಪಾಯಿಯಿಂದ 71.62 ರುಪಾಯಿಗೆ ಏರಿಕೆಗೊಂಡಿದೆ. ಜೂನ್ 7 ರಂದು (ಭಾನುವಾರ) ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ ನಾಲ್ಕು ದಿನ ತೈಲ ಬೆಲೆ ಏರಿಕೆ ಕಂಡಿದೆ.

Key words: Petrol – diesel- prices -increase